“ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ” : ರಾಹುಲ್ ಗಾಂಧಿ ವ್ಯಂಗ್ಯ

Prasthutha|

ಮೋದಿ ಸರ್ಕಾರದ ‘ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ’ ಎಂಬ ಧ್ಯೇಯದ ರೀತಿಯಲ್ಲಿಯೇ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ”ಪ್ರಧಾನ ಮಂತ್ರಿಗಳ ಅವಮಾನಕರ ಅಂಶ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ತೋರಿಸುವ ಗ್ರಾಫ್ ಒಂದನ್ನು ಕೂಡ ರಾಹುಲ್ ಟ್ವಿಟ್ಟರ್  ಅಕೌಂಟ್ ಗೆ ಅಪ್ ಲೋಡ್ ಮಾಡಿದ್ದಾರೆ.

ಶಿಲೀಂಧ್ರ ರೋಗಕ್ಕೆ ನೀಡುವ ಆಂಪೋಟೆರಿಸನ್-ಬಿ ಕೊರತೆಯ ಬಗ್ಗೆ ಸರ್ಕಾರ ಏನು ಹೇಳುತ್ತದೆ. ರೋಗಿಗಳಿಗೆ ಈ ಔಷಧಿಯನ್ನು ಸುಲಭವಾಗಿ ದೊರೆಯುವಂತೆ ಮಾಡಲು ಕೈಗೊಂಡ ಕ್ರಮಗಳೇನು ? ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

Join Whatsapp