ಕಣ್ಣೀರು ತರಿಸಿದ ಈರುಳ್ಳಿ | ಹಬ್ಬದ ಸಂಭ್ರದ ನಡುವೆ ಮಂಗಳೂರಿಗರಿಗೆ ಬೆಲೆ ಏರಿಕೆ ಬಿಸಿ

Prasthutha|

ಮಂಗಳೂರು : ಕೊರೋನ ಲಾಕ್ ಡೌನ್ ನಂತರ ಉದ್ಯೋಗ ಕಳೆದುಕೊಂಡು ತತ್ತರಿಸಿದ್ದ ನಾಗರಿಕರಿಗೆ ಈಗ ಬೆಲೆ ಏರಿಕೆ ಬಿಸಿ ಕೂಡ ತಟ್ಟಿದೆ. ಸರಣಿ ಹಬ್ಬಗಳ ನಡುವೆ, ಮಂಗಳೂರಿನಲ್ಲಿ ಈಗ ಈರುಳ್ಳಿ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ರಖಂ ಮಾರಾಟಗಾರರು ಕೆ.ಜಿ.ಗೆ 81 ರೂ.ಯಂತೆ ಈರುಳ್ಳಿ ಮಾರುತ್ತಿದ್ದು, ಚಿಲ್ಲರೆ ಮಾರಾಟಗಾರರು ಅಂಗಡಿಗಳಲ್ಲಿ ಕೆ.ಜಿ.ಗೆ 90 ರೂ.ಗೆ ಮಾರಾಟ ಮಾಡಿದ್ದಾರೆ

- Advertisement -

ಪ್ರತಿ ದಿನ ದಿನಕ್ಕೆ ಕೆ.ಜಿ.ಗೆ 10 ರೂ. ಏರಿಕೆಯಾಗುತ್ತಿದೆ. ಭಾನುವಾರ ಒಂದೇ ದಿನ ರೂ. 20 ಏರಿಕೆ ಕಂಡಿದೆ. ಮಂಗಳೂರಿಗೆ ಹುಬ್ಬಳ್ಳಿ, ಬೆಳಗಾವಿ ಮತ್ತು ಮಹಾರಾಷ್ಟ್ರ ನಗರಗಳಿಂದ ಪೂರೈಕೆಯಾಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ, ತುಂಬಾ ಈರುಳ್ಳಿಗೆ ಹಾನಿಯಾಗಿದೆ ಎನ್ನಲಾಗುತ್ತಿದೆ.

ಪೂರೈಕೆ ಪ್ರಮಾಣ ಕಡಿಮೆಯಿರುವುದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಬೆಲೆ ಏರಿಕೆಗೆ ಮುಂದಾಗಿದ್ದಾರೆ.



Join Whatsapp