‘ಐಪಿಎಲ್ ನಿಲ್ಲಿಸಿ, ಆ ದುಡ್ಡಿನಿಂದ ಆಮ್ಲಜನಕ ಖರೀದಿಸಿ’ : ಪಾಕಿಸ್ತಾನ ಬೌಲರ್ ಶೋಯೆಬ್ ಅಖ್ತರ್

Prasthutha|

ಸ್ಲಾಮಾಬಾದ್: ಭಾರತದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಗಳನ್ನು ನಡೆಸದಂತೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಭಾನುವಾರ ಪಾಕಿಸ್ತಾನ ಮತ್ತು ಭಾರತದ ಕ್ರಿಕೆಟ್ ಮಂಡಳಿಗಳಿಗೆ ಮನವಿ ಮಾಡಿದ್ದು, ಅದಕ್ಕೆ ಬಳಸುತ್ತಿರುವ ಹಣವನ್ನು ಸೋಂಕಿತರಿಗೆ ಆಮ್ಲಜನಕ ಟ್ಯಾಂಕ್‌ಗಳನ್ನು ಖರೀದಿಸಿ ಜನರ ಪ್ರಾಣವನ್ನು ಉಳಿಸಬಹುದು ಎಂದು ಹೇಳಿದ್ದಾರೆ.

- Advertisement -

ಈ ಕುರಿತು ಯೂಟ್ಯೂಬ್ ವ್ಲಾಗ್ ನೊಂದಿಗೆ ಟ್ವೀಟ್ ಮಾಡಿರುವ ಅಖ್ತರ್ ‘ಐಪಿಎಲ್ ಅಥವಾ ಪಿಎಸ್‌ಎಲ್ ಅನ್ನು ಮುಂದುವರಿಸಲು ಇದು ಉತ್ತಮ ಸಮಯವಲ್ಲ. ಬಿಸಿಸಿಐ ಮತ್ತು ಪಿಸಿಬಿ ಎರಡೂ ಪುನರ್ವಿಮರ್ಶಿಸಬೇಕು. ಪರಿಸ್ಥಿತಿ ತುಂಬಾ ಕಠಿಣವಾಗಿವೆ’ ಎಂದು ಹೇಳಿದ್ದಾರೆ.

ನಮಗೆ ಈ ಪರಿಸ್ಥಿತಿಯಲ್ಲಿ ಐಪಿಎಲ್ ಮುಖ್ಯವಲ್ಲ. ಅದಕ್ಕೆ ಬಳಸುತ್ತಿರುವ ಹಣವನ್ನು ಸೋಂಕಿತರಿಗೆ ಆಮ್ಲಜನಕ ಟ್ಯಾಂಕ್‌ಗಳನ್ನು ತಂದು ಜನರ ಪ್ರಾಣವನ್ನು ಉಳಿಸಬಹುದು. ಈ ಸಮಯದಲ್ಲಿ ನಮಗೆ ಕ್ರಿಕೆಟ್ ಬೇಡ, ವೀರರು ಬೇಡ, ಮನರಂಜನೆ ಬೇಡ. ಭಾರತ ಮತ್ತು ಪಾಕಿಸ್ತಾನದಲ್ಲಿ ಜನರನ್ನು ಉಳಿಸಬೇಕೆಂದು ನಾವು ಇದೀಗ ಬಯಸುತ್ತೇವೆ ‘ಎಂದು ಮಾಜಿ ವೇಗದ ಬೌಲರ್ ಮನವಿ ಮಾಡಿದ್ದಾರೆ.

Join Whatsapp