ಟರ್ಕಿಯ ಜನಪ್ರಿಯ ಅರ್ಥುರುಲ್ ಧಾರಾವಾಹಿ ವೀಕ್ಷಿಸಿದ ನಂತರ ಇಸ್ಲಾಂ ಧರ್ಮದೆಡೆಗೆ ಆಕರ್ಷಿತರಾಗ ಅಮೆರಿಕದ ವಿಸ್ಕಾನ್ಸಿನ್ ನಿವಾಸಿ 60 ವರ್ಷದ ಬ್ಯಾಪಿಸ್ಟ್ ಕ್ಯಾಥೋಲಿಕ್ ಧರ್ಮದ ಮಹಿಳೆಯೊಬ್ಬರು ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ.
ಆರು ಮಕ್ಕಳ ತಾಯಿಯಾಗಿರುವ ಮಹಿಳೆ, ನೆಟ್ ಫ್ಲಿಕ್ಸ್ ಬ್ರೌಸ್ ಮಾಡುವಾಗ ಮೊದಲ ಬಾರಿಗೆ ಈ ಧಾರಾವಾಹಿಯನ್ನು ನೋಡಿ, ಅದರೆಡೆಗೆ ಆಕರ್ಷಿತರಾಗಿದ್ದಾರೆ.
ಧಾರಾವಾಹಿಯ ಒಂದೆರಡು ಕಂತುಗಳನ್ನು ನೋಡಿದ ನಂತರ ಅವರಲ್ಲಿ ಇಸ್ಲಾಂ ಧರ್ಮದ ಬಗ್ಗೆ ಆಸಕ್ತಿ ಮೂಡತೊಡಗಿತು. ಇಸ್ಲಾಂ ಧರ್ಮ ಸ್ವೀಕರಿಸಿದ ನಂತರ ತನ್ನ ಹೆಸರನ್ನು ಅವರು ಖತೀಜಾ ಎಂದು ಬದಲಾಯಿಸಿಕೊಂಡಿದ್ದು, ಅರ್ಥುರುಲ್ ನ ಎಲ್ಲಾ ಸಂಚಿಕೆಗಳನ್ನು ನಾಲ್ಕು ಬಾರಿ ವೀಕ್ಷಿಸಿದ್ದಾರೆ.
ಇಸ್ಲಾಂ ಧರ್ಮ ಸ್ವೀಕರಿಸಲು ನಿರ್ಧರಿಸಿದ ನಂತರ ಹೇಗೆ ಮುಸ್ಲಿಮಳಾಗಬೇಕು ಎಂಬುದರ ಬಗ್ಗೆ ತಿಳಿಯಲು ಹತ್ತಿರದ ಮಸೀದಿಗೆ ತೆರಳಿ ಅಲ್ಲಿ ವಿಚಾರಿಸಿದರು. ನಂತರ ಮುಸ್ಲಿಮರಾದರು.
ಈ ಬೆಳವಣಿಗೆಗೆ ತನ್ನ ಸ್ನೇಹಿತರಿಂದ ಉಂಟಾದ ಅನಿರೀಕ್ಷಿತ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದ ಅವರು, ತಾನು ಇತರರ ನಂಬಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಅವರು ಕೂಡ ನನ್ನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸ್ಪಷ್ಟಪಡಿಸಿದರು.
ಇದು 13ನೇ ಶತಮಾನದ ಮುಸ್ಲಿಂ ಒಗುಝ್ ಟರ್ಕ್ ನಾಯಕ ಎರ್ತುಗ್ರುಲ್ ಅವರ ಜೀವನವನ್ನು ಆಧರಿಸಿದ ಟರ್ಕಿಶ್ ಧಾರಾವಾಹಿ ಇದಾಗಿದೆ. ಈ ಧಾರಾವಾಹಿ ಟರ್ಕಿ ಮತ್ತು ಇತರ ದೇಶಗಳಲ್ಲಿ ವಿಶೇಷವಾಗಿ ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿದ್ದರೂ, ಕೆಲವು ಅರಬ್ ರಾಷ್ಟ್ರಗಳು ಇದರ ವಿರುದ್ಧ ಫತ್ವಾ ಹೊರಡಿಸಿವೆ.
ಅರ್ಥುರುಲ್ ಧಾರಾವಾಹಿ ವೀಕ್ಷಿಸಿ ಇಸ್ಲಾಂ ಸ್ವೀಕರಿಸಿದ ಕ್ರೈಸ್ತ ಮಹಿಳೆ
Prasthutha|