ಎನ್.ಆರ್.ಸಿ ಪರಿಣಾಮವನ್ನು ಆಧರಿಸಿ ಬಾಲಿವುಡ್ ಸಿನೆಮಾ – ‘ನಾಯ್ಸ್ ಆಫ್ ಸೈಲೆನ್ಸ್’

Prasthutha|

ಗುವಾಹಟಿ : ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ( ಎನ್.ಆರ್.ಸಿ) ಕಾನೂನನ್ನು ಆಧರಿಸಿ ಬಾಲಿವುಡ್ ನಲ್ಲಿ ಸಿನೆಮಾವೊಂದನ್ನು ನಿರ್ಮಿಸಲಾಗುತ್ತಿದ್ದು, ಈ ವರ್ಷಾಂತ್ಯದೊಳಗೆ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ.

- Advertisement -

ಸಿನೆಮಾ ಚಿತ್ರೀಕರಣವು ತ್ರಿಪುರಾದಲ್ಲಿ ಪೂರ್ಣಗೊಂಡಿದೆ. ಎನ್.ಆರ್.ಸಿ ಪಟ್ಟಿಯಿಂದ ಹೊರಗುಳಿದವರ ಮತ್ತು ಅವರ ಕುಟುಂಬಗಳ ದುಸ್ಥಿತಿಯನ್ನು ಚಿತ್ರಿಸುವ ಏಕೈಕ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ನಿರ್ದೇಶಕ ಸೈಫ್ ಬೈದ್ಯಾ ಹೇಳುತ್ತಾರೆ.

ಎನ್.ಆರ್.ಸಿ ಪಟ್ಟಿಯಿಂದ ಕೈಬಿಡಲ್ಪಟ್ಟ ತನ್ನ ಮಾಜಿ ಸಹೋದ್ಯೋಗಿಯ ತಂದೆಯ ಅನುಭವವು ಈ ಚಿತ್ರವನ್ನು ನಿರ್ಮಿಸಲು ಸ್ಪೂರ್ತಿಯಾಗಿದೆ ಎಂದು ಅವರು ಹೇಳಿದರು. ಮಾಜಿ ಸೈನಿಕನಾಗಿದ್ದರೂ ಅವರನ್ನು ಎನ್.ಆರ್.ಸಿ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

- Advertisement -

ಈ ಸಿನಿಮಾದಲ್ಲಿ 54 ನಟರಿದ್ದಾರೆ. ಈ ಪೈಕಿ 44 ಮಂದಿ ತ್ರಿಪುರಾದವರಾಗಿದ್ದಾರೆ. ಈ ಚಿತ್ರದಲ್ಲಿ ಹೃಷಿ ರಾಜ್, ಸಯಂತಿಕಾ ನಾಥ್, ಮೀನಾಕ್ಷಿ ಘೋಷ್ ಮುಖ್ಯ ಪಾತ್ರದಲ್ಲಿದ್ದಾರೆ. ಎನ್.ಆರ್.ಸಿ ಪಟ್ಟಿಯಿಂದ ಕೈಬಿಡಲ್ಪಟ್ಟ ದಂಪತಿಗಳು ಮತ್ತು ತಾಯಿಯನ್ನು ಹುಡುಕಿಕೊಂಡು ಭಾರತಕ್ಕೆ ಬರುವ ರೋಹಿಂಗ್ಯಾ ಮುಸ್ಲಿಂ ಹುಡುಗಿಯ ಕತೆಯನ್ನು ಮುಖ್ಯ ಪಾತ್ರವಾಗಿ ಚಿತ್ರದಲ್ಲಿ ತೋರಿಸಲಾಗುತ್ತದೆ.



Join Whatsapp