ಇಸ್ಲಾಮ್ ಗೆ ಅವಮಾನ | ಫ್ರೆಂಚ್ ರಾಯಭಾರಿ ಕರೆಸಿ ಪ್ರತಿಭಟನೆ ದಾಖಲಿಸಿದ ಇರಾನ್

Prasthutha|

ತೆಹ್ರಾನ್ : ಇಸ್ಲಾಮ್ ಮತ್ತು ಪ್ರವಾದಿ ಮುಹಮ್ಮದರ ಅವಮಾನ ಮಾಡಿದುದಕ್ಕೆ ಸಂಬಂಧಿಸಿ ಫ್ರಾನ್ಸ್ ರಾಯಭಾರಿಯನ್ನು ಕರೆಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಲಾಗಿದೆ ಎಂದು ಇರಾನ್ ತಿಳಿಸಿದೆ.

- Advertisement -

ಜಗತ್ತಿನಾದ್ಯಂತದ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಫ್ರೆಂಚ್ ಆಡಳಿತದ ಕ್ರಮ ಸ್ವೀಕಾರಾರ್ಹವಲ್ಲ ಎಂಬ ಸಂದೇಶವನ್ನು ಅಲ್ಲಿನ ರಾಯಭಾರಿಗೆ ರವಾನಿಸುವ ಮೂಲಕ, ಪ್ರಬಲ ಪ್ರತಿಭಟನೆ ದಾಖಲಿಸಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಫ್ರಾನ್ಸ್ ಆಡಳಿತಕ್ಕೆ ತಮ್ಮ ಪ್ರತಿಭಟನೆಯ ಸಂದೇಶ ರವಾನಿಸುವುದಾಗಿ ಫ್ರೆಂಚ್ ರಾಯಭಾರಿ ಭರವಸೆ ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

- Advertisement -

ಜಗತ್ತಿನಾದ್ಯಂತ ಇಸ್ಲಾಮ್ ಬಿಕ್ಕಟ್ಟಿನ ಧರ್ಮ ಮತ್ತು ಮುಸ್ಲಿಮರು ಪ್ರತ್ಯೇಕತವಾದಾ ಮಾಡುತ್ತಾರೆ ಎಂಬ ಹೇಳಿಕೆಯನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮಾಕ್ರೊನ್ ಹೇಳಿದ್ದುದು ಇತ್ತೀಚೆಗೆ ಜಗತ್ತಿನಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.   



Join Whatsapp