ಸುಲಿಮಾನಿಯಾ: ಇರಾನ್ ನಲ್ಲಿ ವಸ್ತ್ರ ಸಂಹಿತೆ ವಿರೋಧಿ ಚಳವಳಿಯು ವ್ಯಾಪಕಗೊಂಡಿದ್ದು, ಪ್ರತಿಭಟನೆಯ ಕಾವು ತೀವ್ರಗೊಂಡಿದೆ.
ಪ್ರತಿಭಟನೆಯ ವೇಳೆ ಪರಿಸ್ಥಿತಿ ನಿಯಂತ್ರಿಸಲು ಗುಂಡು ಹಾರಿಸಿದ್ದರ ಪರಿಣಾಮ ಇಬ್ಬರು ಹೋರಾಟಗಾರರು ಇಂದು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇರಾನ್ ಸರ್ಕಾರದ ವಿರುದ್ಧವೇ ಈ ಪ್ರತಿಭಟನೆ ನಡೆಯುತ್ತಿದ್ದು ,ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ.
ಗುಂಡು ತಗುಲಿ ಮೃತಪಟ್ಟಿದ್ದ ಆರೋಪವನ್ನು ಭದ್ರತಾ ಪಡೆಗಳು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.