ಇರಾಕ್ ಸಮಕಾಲೀನ ಕಲಾ ಪ್ರತಿಭೆ ನಜೀಹಾ ಸಲೀಂನನ್ನು ಡೂಡಲ್ ನೊಂದಿಗೆ ಗೌರವಿಸಿದ ಗೂಗಲ್

Prasthutha|

ವಾಶಿಂಗ್ಟನ್ : ಇರಾಕಿ ಸಮಕಾಲೀನ ಕಲಾ ಪ್ರತಿಭೆ ನಜೀಹಾ ಸಲೀಂ ಅವರನ್ನು ಗೂಗಲ್ ಇಂದು ಡೂಡಲ್ ಮೂಲಕ ಗೌರವಿಸಿದ್ದು 2020 ರ ಈ ದಿನದಂದು, ವರ್ಣಚಿತ್ರ ಕಲಾವಿದೆ ನಜೀಹಾ ಸಲೀಂರನ್ನು ಇರಾಕಿನ ಸಮಕಾಲೀನ ಕಲಾ ದೃಶ್ಯದಲ್ಲಿ ಅತ್ಯಂತ ಪ್ರಭಾವಶಾಲಿ ಕಲಾವಿದರಲ್ಲಿ ಒಬ್ಬರು  ಎಂದು ಬಣ್ಣಿಸಲಾಗಿತ್ತು.

- Advertisement -

ಬರ್ಜೀಲ್ ಆರ್ಟ್ ಫೌಂಡೇಶನ್ ಮಹಿಳಾ ಕಲಾವಿದರ ಸಂಗ್ರಹದಲ್ಲಿ ಇವರ ಕಲಾ ಚಿತ್ರ ಗಮನ ಸೆಳೆದಿದೆ ಎಂದು ಗೂಗಲ್ ತಿಳಿಸಿದ್ದು “ಅವರ ಕೆಲಸವು ಆಗಾಗ್ಗೆ ಗ್ರಾಮೀಣ ಇರಾಕಿ ಮಹಿಳೆಯರು ಮತ್ತು ರೈತ ಜೀವನವನ್ನು ಸ್ಪಷ್ಟ ಬಣ್ಣಗಳ ಮೂಲಕ ಚಿತ್ರಿಸುತ್ತದೆ” ಎಂದು ಹೇಳಿದೆ.

ಇಂದಿನ ಡೂಡಲ್ ಕಲಾಕೃತಿಯು ಸಲೀಮ್ ಅವರ ಚಿತ್ರಕಲಾ ಶೈಲಿಗೆ ಒಂದು ಓಡ್ ಆಗಿದೆ ಮತ್ತು ಕಲಾ ಜಗತ್ತಿಗೆ ಅವರ ದೀರ್ಘಕಾಲದ ಕೊಡುಗೆಗಳ ಆಚರಣೆಯಾಗಿದೆ! ನಜೀಹಾ ಸಲೀಂ 1927 ರಲ್ಲಿ ಟರ್ಕಿಯ ಇಸ್ತಾಂಬುಲ್ ನಲ್ಲಿ ಇರಾಕಿ ಕಲಾವಿದರ ಕುಟುಂಬದಲ್ಲಿ ಜನಿಸಿದ್ದು ಅವರ ತಂದೆ ಚಿತ್ರಕಲಾವಿದರಾಗಿದ್ದರು ಮತ್ತು ಅವರ ತಾಯಿ ಕಸೂತಿ ಕಲಾವಿದರಾಗಿದ್ದರು. ಅವರಿಗೆ ಮೂವರು ಸಹೋದರರಿದ್ದು ಅವರೆಲ್ಲರೂ ಕಲೆಗಳಲ್ಲಿ ಕೆಲಸ ಮಾಡುತ್ತಿದ್ದರು. ಸಹೋದರರಲ್ಲಿ ಒಬ್ಬರಾದ ಜವಾದ್ ಸಲೀಂ ಅವರನ್ನು ಇರಾಕ್ ನ ಅತ್ಯಂತ ಪ್ರಭಾವಶಾಲಿ ಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು

Join Whatsapp