‘ಇದು ನನ್ನ ಝಕಾತ್ ಆಗಿದೆ’| ಆಮ್ಲಜನಕ ಪೂರೈಸಿದ 85 ಲಕ್ಷ ಬೇಡವೆಂದ ಪ್ಯಾರೇ ಖಾನ್!

Prasthutha|

ನಾಗ್ಪುರ: ಇಡೀ ದೇಶವೇ ಕೋವಿಡ್ ನಿಂದ ತತ್ತರಿಸುತ್ತಿರುವಾಗ ಮಹಾರಾಷ್ಟ್ರದ ಉದ್ಯಮಿ ಪ್ಯಾರೆ ಖಾನ್ ಅವರ ಮಾನವೀಯ ಕಾರ್ಯ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

- Advertisement -

ತನ್ನ ಟ್ಯಾಂಕರ್ ಲಾರಿಗಳ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪುರೈಸುತ್ತಿರುವ ಪ್ಯಾರೆ ಖಾನ್ ಅವರಿಗೆ ಆಮ್ಲಜನಕದ 85 ಲಕ್ಷ ರೂ ಹಣವನ್ನು ಆಸ್ಪತ್ರೆಯ ಅಧಿಕಾರಿಗಳು ನೀಡಿದಾಗ ಅದನ್ನು ಅವರು ನಿರಾಕರಿಸಿ ಆ ಎಲ್ಲಾ ಮೊತ್ತವನ್ನು ತನ್ನ ರಂಝಾನ್ ಝಕಾತ್ ಎಂದು ಪರಿಗಣಿಸಲು ಕೇಳಿಕೊಂಡಿದ್ದಾರೆ.

ಆಮ್ಲಜನಕ ಮೊತ್ತವನ್ನು ಪಾವತಿಸುವುದಾಗಿ ಸರ್ಕಾರಿ ಅಧಿಕಾರಿಗಳು ಪದೇ ಪದೇ ಕೇಳಿಕೊಂಡರೂ ಪ್ಯಾರೆ ಖಾನ್ ನಿರಾಕರಿಸಿದ್ದಾರೆ ಎನ್ನಲಾಗಿದೆ. “ಪವಿತ್ರ ರಂಝಾನ್ ತಿಂಗಳಲ್ಲಿ ಇಂತಹಾ ಸೇವೆ ಮಾಡುವುದು ನನ್ನ ಕರ್ತವ್ಯವಾಗಿದ್ದು, ಅದನ್ನು ನಾನು ಝಕಾತ್ ಎಂದು ಪರಿಗಣಿಸುತ್ತೇನೆ. ಇದು ಬಿಕ್ಕಟ್ಟಿನ ಸಮಯವಾಗಿರುವುದರಿಂದ ಎಲ್ಲಾ ಸಮುದಾಯಗಳಿಗೆ ಪ್ರಾಣವಾಯು ತಲುಪಿಸುವುದು ಒಂದು ಪವಿತ್ರ ಕಾರ್ಯವಾಗಿದೆ”ಎಂದು ಪ್ಯಾರೆ ಖಾನ್ ಹೇಳುತ್ತಾರೆ.

- Advertisement -

ಅಗತ್ಯ ಬಿದ್ದರೆ  ಬ್ರಸೆಲ್ಸ್‌ನಿಂದ ವಿಮಾನದ ಮೂಲಕ ಆಮ್ಲಜನಕ ಟ್ಯಾಂಕರ್‌ಗಳನ್ನು ಸಾಗಿಸಲು ಶ್ರಮಿಸುವುದಾಗಿಯೂ ಪ್ಯಾರೆ ಖಾನ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಪ್ಯಾರೆ ಖಾನ್ 1995 ರಲ್ಲಿ ನಾಗ್ಪುರ ರೈಲ್ವೆ ನಿಲ್ದಾಣದ ಹೊರಗೆ ಕಿತ್ತಳೆ ಮಾರಾಟಗಾರರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
ತಾಜ್ ಬಾಗ್‌ನ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ದಿನಸಿ ವ್ಯಾಪಾರಿಯ ಮಗನಾದ ಅವರು ಈಗ 400 ಕೋಟಿ ರೂ. ಬಂಡವಾಳ ಹೊಂದಿರುವ ಕಂಪನಿಯ ಮಾಲಿಕ.

Join Whatsapp