ಆ.5ರಿಂದ ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ವಿಮಾನಯಾನ | ಇಲ್ಲಿದೆ ವೇಳಾಪಟ್ಟಿ

Prasthutha|

ಮಂಗಳೂರು : ಕೊರೊನಾ ಸಂಕಷ್ಟದಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಹೇರಲಾಗಿದ್ದ ನಿರ್ಬಂಧ ಹಂತಹಂತವಾಗಿ ಸಡಿಲಗೊಳಿಸಲಾಗುತ್ತಿದೆ. ಈ ಕುರಿತ ಐದನೇ ಹಂತದ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ಆಗಸ್ಟ್ ಮೊದಲ ಹಾಗೂ ಎರಡನೇ ವಾರದಲ್ಲಿ ಹಾರಾಟ ನಡೆಸಲಿವೆ. ಈ ಅವಧಿಯಲ್ಲಿ ಒಟ್ಟು ಏಳು ವಿಮಾನಗಳು ಗಲ್ಫ್ ಗೆ ಹಾರಾಟ ನಡೆಸುವ ಮಾಹಿತಿ ಲಭ್ಯವಾಗಿದೆ.

- Advertisement -

ಆ.5ರ ಮಧ್ಯಾಹ್ನ 12:40ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಮೊದಲ ವಿಮಾನ ಹೊರಟು ಮಧ್ಯಾಹ್ನ 2:30ಕ್ಕೆ ದುಬೈ ತಲುಪಲಿದೆ. ಆ.6 ಮತ್ತು ಆ.9ರಂದು ಇದೇ ವೇಳೆಯಲ್ಲಿ ಮಂಗಳೂರಿನಿಂದ ದುಬೈಗೆ ವಿಮಾನಗಳು ಹಾರಾಟ ನಡೆಸಲಿವೆ. ಆ.8 ಮತ್ತು ಆ.15ರಂದು ಮಂಗಳೂರಿನಿಂದ ಶಾರ್ಜಾಕ್ಕೆ ವಿಮಾನಗಳು ಹಾರಲಿದ್ದು, ಇವು ಬೆಳಗ್ಗೆ 11:05ಕ್ಕೆ ಮಂಗಳೂರಿನಿಂದ ಹೊರಟು 1 ಗಂಟೆಗೆ ಶಾರ್ಜಾ ತಲುಪಲಿವೆ. ಆ.7 ಮತ್ತು ಆ.14ರಂದು ಹೊರಡುವ ವಿಮಾನಗಳು ಅಬುಧಾಬಿಗೆ ಪ್ರಯಾಣಿಸಲಿವೆ. ಈ ವಿಮಾನಗಳು ಬೆಳಗ್ಗೆ 12:40ಕ್ಕೆ ಹೊರಟು ಮಧ್ಯಾಹ್ನ 2:30ಕ್ಕೆ ಅಬುಧಾಬಿ ತಲುಪಲಿವೆ. ಈ ವಿಮಾನಗಳು ಹಿಂದಿರುಗುವ ವೇಳೆ ಅಲ್ಲಿರುವ ಕನ್ನಡಿಗರನ್ನು ತವರಿಗೆ ಕರೆ ತರಲಿವೆ ಎಂದು ವರದಿಯೊಂದು ತಿಳಿಸಿದೆ.



Join Whatsapp