ಹೊಸದಿಲ್ಲಿ : ರೈತರ ಮುಷ್ಕರದಲ್ಲಿ ಮೃತಪಟ್ಟ ರೈತನ ಶವ ಆಸ್ಪತ್ರೆಯಲ್ಲಿ ಇಲಿ ಕಚ್ಚಿ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೆಹಲಿ-ಹರಿಯಾಣ ಗಡಿಯಾದ ಕುಂಡ್ಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 70 ವರ್ಷದ ವ್ಯಕ್ತಿಯ ಶವವನ್ನು ಇಲಿ ಕಚ್ವಿ ತಿಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೋನಿಪತ್‌ನ ಆಸ್ಪತ್ರೆಯಲ್ಲಿ ಇಡಲಾಗಿತ್ತು. ರಾಜೇಂದ್ರ ಸರೋಹಾ ಎಂಬ ರೈತರೊಬ್ಬರು ಬುಧವಾರ ರಾತ್ರಿ ಪ್ರತಿಭಟನೆಯ ನಡುವೆ ಮೃತಪಟ್ಟಿದ್ದರು. ಸಾವಿಗೆ ಕಾರಣ ಸ್ಪಷ್ಟವಾಗದಿರುವುದರಿಂದಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಮೃತದೇಹವನ್ನು ಫ್ರೀಜರ್‌ನಿಂದ ಹೊರತೆಗೆದಾಗ ಇಲಿ ಕಚ್ಚಿ ತಿಂದ ಸ್ಥಿತಿಯಲ್ಲಿತ್ತು. ಮುಖ ಮತ್ತು ಕಾಲುಗಳನ್ನು ಇಲಿಗಳು ವಿರೂಪಗೊಳಿಸಿತ್ತು.
“ಮೃತದೇಹದಿಂದ ರಕ್ತ ಸೋರುತ್ತಿತ್ತು. ತಂದೆಯ ದೇಹದ ಮೇಲೆ ಆಳವಾದ ಗಾಯವೂ ಇತ್ತು. ಇದು ಗ್ರಾಮಸ್ಥರು ಮತ್ತು ಖಾಪ್ ಪಂಚಾಯಿತಿಯ ಪ್ರತಿಭಟನೆಗೆ ಕಾರಣವಾಯಿತು” ಎಂದು ರಾಜೇಂದ್ರ ಸರೋಹಾ ಅವರ ಪುತ್ರ ಹೇಳಿದ್ದಾನೆ. ಅದೇ ವೇಳೆ ಘಟನೆಯ ಬಗ್ಗೆ ತನಿಖೆ ನಡೆಸಲು ಮೂರು ಸದಸ್ಯರ ಸಮಿತಿಯನ್ನು ನೇಮಿಸಲಾಗಿದೆ.