ಭೋಪಾಲ್ : ಮಧ್ಯಪ್ರದೇಶದ ರತ್ಲಾಂನ ಆಸ್ಪತ್ರೆ ಹಾಸಿಗೆಯ ಮೇಲೆ ನಾಯಿಯೊಂದು ಮಲಗಿರುವ ವೀಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿರೋಧ ಪಕ್ಷವಾದ ಕಾಂಗ್ರೆಸ್, ಇದು ರಾಜ್ಯದಲ್ಲಿನ ಆತಂಕಕಾರಿ ಆರೋಗ್ಯ ವ್ಯವಸ್ಥೆ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ರತ್ಲಾಮ್ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಪ್ರಭಾಕರ್ ನನವಾರೆ ಅವರು ರಜೆಯಲ್ಲಿದ್ದ ಕಾರಣ ಘಟನೆಯ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದು, ಈ ಕುರಿತು ಟ್ವೀಟ್ ಮಾಡಿರುವ ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ, ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ನಾಯಿಗಳು ಉತ್ತಮ ನಿದ್ರೆ ಮಾಡುತ್ತಿವೆ, ಆದರೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
मध्यप्रदेश में भले मरीज़ों को बेड़ मिले या ना मिले लेकिन “श्वान “ तो बेड पर मस्त सोया हुआ है…
— Narendra Saluja (@NarendraSaluja) September 16, 2022
तस्वीर रतलाम के अलोट की बतायी जा रही है…
“बदहाल स्वास्थ्य सिस्टम” pic.twitter.com/mhqjdGNiEx
ಈ ವಿಡಿಯೋ ಇಲ್ಲಿನ ಅಲೋಟ್ನ ಸರ್ಕಾರಿ ಆಸ್ಪತ್ರೆಯಿಂದ ಚಿತ್ರೀಕರಿಸಲಾಗಿದ್ದು, ಇದು ಬಿಜೆಪಿಯ ಆತಂಕಕಾರಿ ಆರೋಗ್ಯ ವ್ಯವಸ್ಥೆ ಎಂದು ಕಾಂಗ್ರೆಸ್ ಮುಖಂಡ ನರೇಂದ್ರ ಸಲೂಜಾ ಟ್ವೀಟ್ ಮಾಡಿದ್ದಾರೆ.