ಅ.25ರಿಂದ ಮಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭ

Prasthutha|

ಮೈಸೂರು : ಮೈಸೂರು ಮತ್ತು ಮಂಗಳೂರಿಗರಿಗೆ ಸಿಹಿ ಸುದ್ದಿ. ಇನ್ನು ಅ.25ರಿಂದ ಈ ಎರಡೂ ನಗರಗಳ ನಡುವೆ ವಿಮಾನದಲ್ಲಿ ಓಡಾಟ ನಡೆಸಬಹುದು. ಅ.25ರಿಂದ ಮಂಗಳೂರಿನಿಂದ ಮೈಸೂರಿಗೆ ವಿಮಾನ ಯಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ.

- Advertisement -

ಟ್ರಯಲ್ ರನ್ ನಂತರ ಕಾರ್ಯ ಸಾಧ್ಯತಾ ವರದಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಏರ್ ಇಂಡಿಯಾ ಬೆಂಗಳೂರಿನಿಂದ ಮಂಗಳೂರಿಗೆ ಬೆಳಗ್ಗೆ 6:50ಕ್ಕೆ ಬರುವ ವಿಮಾನವನ್ನೇ ಮೈಸೂರಿನ ಕಡೆ ತಿರುಗಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮೈಸೂರಿನಿಂದ 7:55ಕ್ಕೆ ಹೊರಟು, 8:50ಕ್ಕೆ ಮಂಗಳೂರಿಗೆ ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ.     

Join Whatsapp