ಅಸ್ಸಾಂ ಎನ್‌ಆರ್‌ಸಿ| 104 ವರ್ಷದ ಬಂಗಾಳಿ ವ್ಯಕ್ತಿ ಪೌರತ್ವ ಸಾಬೀತುಪಡಿಸುವ ಮೊದಲೇ ನಿಧನ

Prasthutha|

ಹಿಂದೂ ಬಂಗಾಳಿ ಪ್ರಾಬಲ್ಯದ ಅಸ್ಸಾಂನ 104 ವರ್ಷದ ಚಂದ್ರಹಾರ್ ದಾಸ್ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಮೊದಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

- Advertisement -

ಎರಡು ವರ್ಷಗಳ ಹಿಂದೆ, ಚಂದ್ರಹರರನ್ನು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯ ಅಂತಿಮ ಪಟ್ಟಿಯಲ್ಲಿ ಹೆಸರಿಸದಿದ್ದಾಗ, ಅವರನ್ನು ವಿದೇಶಿ ಎಂದು ಕರೆದು 3 ತಿಂಗಳು ಬಂಧನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಅವರ ಪೌರತ್ವವನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಹೇಳಲಾಗಿತ್ತು. ಆದರೆ, ಅವರು ತಮ್ಮ ಪೌರತ್ವ ಸಾಬೀತುಪಡಿಸುವ ಮೊದಲೇ ನಿಧನರಾದರು.

ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಅವರ ಪುತ್ರಿ ನಿಯಾಂತಿ ದಾಸ್, “ಪ್ರಧಾನಿ ಮೋದಿಯವರ ಪೋಸ್ಟರ್‌ಗಳು ಮನೆಯಲ್ಲಿ, ಬೀದಿ ಬೀದಿಗಳಲ್ಲಿವೆ. ನಾನು ಎಲ್ಲಿ ನೋಡಿದರೂ, ಅವರಿಗೆ ಕೈಮುಗಿಯುತ್ತೇನೆ. ಏಕೆಂದರೆ ನನ್ನ ತಂದೆ ಪ್ರಧಾನಿಯನ್ನು ದೇವರು ಎಂದು ಪರಿಗಣಿಸಿದ್ದರು. ಅವರು ಎಲ್ಲವನ್ನೂ ಸರಿಪಡಿಸುತ್ತಾರೆ. ಪೌರತ್ವದ ಕಾನೂನು ಬಂದಿದೆ, ನಾವೆಲ್ಲರೂ ಭಾರತೀಯರಾಗುತ್ತೇವೆ ಎಂದಿದ್ದರು. ಆದರೆ ನನ್ನ ತಂದೆ ಒಬ್ಬ ಭಾರತೀಯನಾಗಿ ಸಾಯಲು ಇಚ್ಚಿಸುತ್ತಿದ್ದರು. ನಾವು ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರೂ, ಕಾನೂನಿನ ದೃಷ್ಟಿಯಲ್ಲಿ ಇನ್ನೂ ವಿದೇಶಿಗರಾಗಿದ್ದೇವೆ. ಇದೀಗ ಸುಮಾರು ಒಂದು ವರ್ಷವಾದರೂ ಪೌರತ್ವ ಕಾನೂನಿನಿಂದ ನಮಗೆ ಯಾವ ಉಪಕಾರವೂ ಆಗಲಿಲ್ಲ” ಎಂದು ಹೇಳಿದ್ದಾರೆ.

Join Whatsapp