ಅಲ್ಪಸಂಖ್ಯಾತರ ಕಲ್ಯಾಣ ಯೋಜನೆ: ಶೇ.44ರಷ್ಟು ಅನುದಾನ ಕಡಿತಗೊಳಿಸಿದ ಯಡಿಯೂರಪ್ಪ ಸರಕಾರ

Prasthutha|

ಬಿ.ಎಸ್.ಯಡಿಯೂರಪ್ಪ ಸರಕಾರವು ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳಿಗೆ ಶೇ.44 ಅಥವಾ ರೂ.468 ಕೋಟಿ ಹಣವನ್ನು ಕಡಿತಗೊಳಿಸಿದ್ದು, ಇದರ ಪರಿಣಾಮವಾಗಿ ಈ ಹಣಕಾಸು ವರ್ಷದಲ್ಲಿ ಮುಸ್ಲಿಮರು, ಜೈನರು, ಬೌದ್ಧರು ಮತ್ತು ಸಿಖ್ಖರನ್ನು ಒಳಗೊಂಡ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ.

- Advertisement -

ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಂತ್ ಪಾಟೀಲ್ ವಿಧಾನಸಭೆಯಲ್ಲಿ ನೀಡಿದ ಮಾಹಿತಿ ಪ್ರಕಾರ, 2020-21ರ ಹಣಕಾಸು ವರ್ಷದಲ್ಲಿ 5 ಯೋಜನೆಗಳನ್ನು ತೆಗೆದುಹಾಕಲಾಗಿದೆ. ಯಾಕೆಂದರೆ ಅವುಗಳಿಗೆ ಯಾವುದೇ ಹಂಚಿಕೆ ಮಾಡಲಾಗಿರಲಿಲ್ಲ. ಮುಸ್ಲಿಮ್ ಸಮುದಾಯ ಭವನ (ಶಾದಿ ಮಹಲ್),  ಅಲ್ಪಸಂಖ್ಯಾತರ ಕೌಶಲ್ಯಾಭಿವೃದ್ಧಿ, ಬಿದಾಯಿ (ಶಾದಿ ಭಾಗ್ಯ ಯೋಜನೆ), ಮುಖ್ಯಮಂತ್ರಿಯವರ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳು, ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳಿಗೆ ನೀಡಲಾಗುತ್ತಿದ್ದ ಹಣಕಾಸಿನ ನೆರವು ಇದರಲ್ಲಿ ಒಳಗೊಂಡಿದೆ.

ಮಾತ್ರವಲ್ಲ, ಅಲ್ಪಸಂಖ್ಯಾತರ ಅಭಿವೃದ್ಧಿಯ ಗುರಿಯಾಗಿಟ್ಟುಕೊಂಡು ನಡೆಯುತ್ತಿದ್ದ  ಹಲವಾರು ಕಾರ್ಯಕ್ರಮಗಳಿಗೂ ರಾಜ್ಯ ಸರಕಾರವು ಹಣಕಾಸನ್ನು ಕಡಿತಗೊಳಿಸಿದೆ. ಅವುಗಳಲ್ಲಿ ಕ್ರಿಶ್ಚಿಯನ್ನರ ಅಭಿವೃದ್ಧಿಗೆ ಹಣ, ಸರ್ಕಾರಿ ಅಲ್ಪಸಂಖ್ಯಾತ ಶಾಲೆಗಳಲ್ಲಿ ಕಲಿಕೆಯ ಮಧ್ಯಸ್ಥಿಕೆಗಳು, ವಿದ್ಯಾಸಿರಿ ಸ್ಟೈಫಂಡ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ಹೊಸ ವಿದ್ಯಾರ್ಥಿ ನಿಲಯಗಳೂ ಸೇರಿವೆ.

- Advertisement -

ಒಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 2019-20ರಲ್ಲಿ ರೂ.1,418.98 ಕೋಟಿ ಹಂಚಿಕೆ ಮಾಡಲಾಗಿದ್ದು, ಇದು ಈ ವರ್ಷದ ವಿತ್ತೀಯ ವರ್ಷದಲ್ಲಿ ರೂ.950ಕ್ಕೆ ಇಳಿದಿದೆ.



Join Whatsapp