ಅಮಿತ್ ಶಾಗೆ ಕಪ್ಪು ಬಾವುಟ ಪ್ರದರ್ಶನ

Prasthutha|

ಕೋಲ್ಕತಾ: ರವಿವಾರದಂದು ಬೋಲ್ಪುರದ ಶಾಂತಿನಿಕೇತನದಲ್ಲಿರುವ ರವೀಂದ್ರ ನಾಥ್ ಟಾಗೂರ್ ಸ್ಮರಣಾರ್ಥ ವಿಶ್ವಭಾರತಿ ವಿಶ್ವವಿದ್ಯಾನಿಲಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿಗಳು, ಸ್ಥಳೀಯರು ಮತ್ತು ಜನಪದ ಹಾಡುಗಾರರು ಕಪ್ಪು ಬಾವುಟ ಮತ್ತು ಪ್ಲೇಕಾರ್ಡ್ ಗಳನ್ನು ತೋರಿಸಿ ಪ್ರತಿಭಟಿಸಿದರು.

- Advertisement -

ಟಾಗೂರ್ ರನ್ನು ಉದ್ದೇಶ ಪೂರ್ವಕವಾಗಿ ರಾಜಕೀಯ ಅಸ್ತ್ರವಾಗಿ ಬಿಜೆಪಿ ಬಳಕೆ ಮಾಡುತ್ತಿರುವುದನ್ನು ಮತ್ತು ವಿಶ್ವಭಾರತಿ ವಿಶ್ವವಿದ್ಯಾನಿಲಯದ ದೀರ್ಘಕಾಲೀನ ಸಂಪ್ರದಾಯವನ್ನು ಬದಲಾಯಿಸಿರುವುದನ್ನು ಪ್ರತಿಭಟನಕಾರರು ಖಂಡಿಸಿದರು.

“ಟಾಗೂರ್ ವಿರೋಧಿಸಿರುವುದನ್ನೆಲ್ಲಾ ಬಿಜೆಪಿ ಪ್ರತಿನಿಧಿಸುತ್ತದೆ. ತಮ್ಮ ನಿರೂಪಣೆಗೆ ರಬೀಂದ್ರನಾಥ್ ರನ್ನು ಹೊಂದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಪ್ರಸ್ತುತ ಉಪ ಕುಲಪತಿಯವರು ಕ್ಯಾಂಪಸನ್ನು ಕೇಸ್ರೀಕರಣಗೊಳಿಸಲು ಮತ್ತು ಟಾಗೂರ್ ರ ಆಲೋಚನೆ ಮತ್ತು ತತ್ವಗಳನ್ನು ಅಳಿಸಲು ಕಠಿಣವಾಗಿ ಪ್ರಯತ್ನಿಸುತ್ತಿದ್ದಾರೆ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದು ಪ್ರತಿಭಟನಾ ನಿರತ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿನಿ ಮತ್ತು ಸ್ಥಳೀಯ ನಿವಾಸಿ ಮೊನಿಶಾ ಬೊಂಧೋಪಾದ್ಯ ಹೇಳಿದ್ದಾರೆ.

Join Whatsapp