ನವದೆಹಲಿ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಮರಳಿದರೆ ದೇವಾಲಯ ಮತ್ತು ಗುರುದ್ವಾರದ ಅರ್ಚಕರಿಗೆ ತಲಾ ₹18,000 ಭತ್ಯೆ ನೀಡುವುದಾಗಿ ಎಎಪಿ ವರಿಷ್ಠ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.
ಅದಕ್ಕಾಗಿ, ‘ಪೂಜಾರಿ– ಗ್ರಂಥಿ ಸಮ್ಮಾನ್ ಯೋಜನೆ’ಯನ್ನು ಅವರು ಪ್ರಕಟಿಸಿದ್ದಾರೆ.
ಇದೇ ಫೆಬ್ರುವರಿಯಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳುವ ಪಣತೊಟ್ಟಿರುವ ಎಎಪಿ ಹಲವು ಯೋಜನೆಗಳನ್ನು ಘೋಷಿಸುತ್ತಿದೆ.
‘ಅರ್ಚಕರು ಮತ್ತು ಗ್ರಂಥಿಗಳು ನಮ್ಮ ಸಮಾಜದ ಪ್ರಮುಖ ಭಾಗವಾಗಿದ್ದಾರೆ., ಆದರೆ, ಅವರು ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಟ್ಟ ವರ್ಗದಲ್ಲಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ, ನಾವು ಅವರನ್ನು ಬೆಂಬಲಿಸುವ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ. ಅದರ ಅಡಿಯಲ್ಲಿ ಅವರು ಮಾಸಿಕ ₹18,000ಗಳನ್ನು ಪಡೆಯುತ್ತಾರೆ’ಯೋಜನೆಗೆ ನೋಂದಣಿ ನಾಳೆಯಿಂದ ಪ್ರಾರಂಭವಾಗಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.