ಅದಾನಿಯನ್ನು ಉಳಿಸಲು ‘ಒಂದು ದೇಶ, ಒಂದು ಚುನಾವಣೆ’: ಪ್ರಿಯಾಂಕ್ ಖರ್ಗೆ ಕಿಡಿ

Prasthutha|

ಬೆಳಗಾವಿ: ಉದ್ಯಮಿ ಗೌತಮ್ ಅದಾನಿಯನ್ನು ಉಳಿಸಲು ‘ಒಂದು ದೇಶ, ಒಂದು ಚುನಾವಣೆ’ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

- Advertisement -

ಬೆಳಗಾವಿ ಸುವರ್ಣ ಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, “ಮಣಿಪುರ 20 ತಿಂಗಳಿಂದ ಹತ್ತಿ ಉರಿಯುತ್ತಿದೆ. ಇದರ ಬಗ್ಗೆ ಮಾತನಾಡೋಕೆ ಅವರಿಗೆ ಆಗ್ತಿಲ್ಲ. ರಾಷ್ಟ್ರದ ಆರ್ಥಿಕತೆ ಕುಸಿಯುತ್ತಿದೆ. ಅದಾನಿ ಪ್ರಕರಣದ ಬಗ್ಗೆ ಮಾತಿಗೆ ತಯಾರಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ನಡೆಸುವ ಪ್ರಯತ್ನ ಇದಾಗಿದೆ,” ಎಂದು ಕಿಡಿಕಾರಿದರು.
ಒನ್ ನೇಷನ್ ಒನ್ ಎಲೆಕ್ಷನ್ ಗೆ ತಯಾರಿ ಬೇಕು. ಸಂವಿಧಾನದಲ್ಲಿ ಕೆಲವು ಬದಲಾವಣೆ ತರಬೇಕು. ತಾಂತ್ರಿಕವಾಗಿ ಇದಕ್ಕೆ ಸಿದ್ಧರಿದ್ದಾರಾ? ಇದೆಲ್ಲವೂ ಕೂಡ ಮಾಡಿ ಮಾಡಬೇಕು. ರಾತ್ರಿ ವೇಳೆ ಮೋದಿ ಕನಸು ಕಾಣ್ತಾರೆ. ಆ ಕನಸು ನನಸು ಮಾಡೋಕೆ ಸಚಿವರು ಹೊರಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



Join Whatsapp