ಅಜ್ಞಾತ ಮೃತದೇಹವನ್ನು ಎರಡು ಕಿಲೋಮೀಟರ್ ಹೊತ್ತು ಸಾಗಿದ ಪೊಲೀಸ್ ಅಧಿಕಾರಿ : ವಿಡಿಯೋ ವೈರಲ್

Prasthutha|

- Advertisement -

ಸ್ಥಳೀಯರು ಸಾಗಿಸಲು ನಿರಾಕರಿಸಿದ ಅಜ್ಞಾತ ಮೃತದೇಹವನ್ನು ಆಂದ್ರಪ್ರದೇಶದ ವನಿತಾ ಪೊಲೀಸ್ ಅಧಿಕಾರಿ ಸಿರಿಶಾ ಎರಡು ಕಿಲೋಮೀಟರ್ ದೂರ ಹೆಗಲ ಮೇಲೆ ಹೊತ್ತುಕೊಂಡು ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಈ ಘಟನೆ ನಡೆದಿದೆ. ಸ್ವಂತ ಮನೆಯಿಲ್ಲದ 80 ವರ್ಷದ ವೃದ್ಧರೊಬ್ಬರು ಗದ್ದೆಯೊಂದರಲ್ಲಿ ಸಾವನ್ನಪ್ಪಿದ್ದರು. ಶವವನ್ನು ವಾಹನಕ್ಕೆ ಸಾಗಿಸಲು ಜಮೀನಿಗೆ ಯಾವುದೇ ರಸ್ತೆ ಇರಲಿಲ್ಲ. ಸ್ಥಳೀಯರು ಯಾರೂ ಶವವನ್ನು ಸಾಗಿಸಲು ಅಥವಾ ವಾಹನದಲ್ಲಿ ಇರಿಸಲು ಸಿದ್ಧರಿರಲಿಲ್ಲ.

- Advertisement -

ಘಟನೆಯ ಬಗ್ಗೆ ತಿಳಿದ ಕಾಸಿಬುಗ್ಗ ಪೊಲೀಸ್ ಠಾಣೆಯ ಎಸ್‌ಐ ಕೊಟ್ಟೂರು ಸಿರಿಶಾ, ಕಾನ್‌ಸ್ಟೆಬಲ್‌ಗಳ ಸಹಾಯದಿಂದ ಶವವನ್ನು ಸ್ಟ್ರೆಚರ್ ಮೇಲೆ ಇರಿಸಿ ತನ್ನ ಹೆಗಲ ಮೇಲೆ ಹೊತ್ತು ವಾಹನಕ್ಕೆ ಸಾಗಿಸಿದ್ದಾರೆ. ಸಿರಿಶಾ ಸುಮಾರು ಅರ್ಧ ಘಂಟೆಗಳ ಕಾಲ ಮೃತದೇಹವನ್ನು ತನ್ನ ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ಸಿರಿಶಾ ಶವವನ್ನು ಗದ್ದೆಗಳ ಮಧ್ಯೆ ಸಾಗಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಪ್ರಕಟವಾಗಿದೆ.

Join Whatsapp