ನವದೆಹಲಿ: ದೇಶಾದ್ಯಂತ ಅಗ್ನಿಪಥ್ ಯೋಜನೆಯ ವಿರುದ್ಧ ಆಕ್ರೋಶಗಳು ಹೆಚ್ಚಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿವೆ. ಈ ಹಿಂಸಾಚಾರದಲ್ಲಿ ಭಾಗಿಯಾದ ಎಷ್ಟು ಪ್ರತಿಭಟನಾಕಾರರ ಮನೆಗಳ ಮೇಲೆ ಬುಲ್ಡೋಝರ್ ಬಳಸಿ ನೆಯಸಮಗೊಳಿಸಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ
ನಿಮ್ಮ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ್ದೀರಿ ಎಂದು ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಸರ್ಕಾರಕವನ್ನು ಪ್ರಶ್ನಿಸಿರುವ ಓವೈಸಿ, ಪ್ರಧಾನಿ ಮೋದಿಯ ತಪ್ಪು ನಿರ್ಧಾರದಿಂದ ಯುವಸಮುದಾಯ ಬೀದಿಗಿಳಿದಿದೆ ಎಂದು ಅವರು ಆರೋಪಿಸಿದ್ದಾರೆ.
ಯಾರ ಮನೆಯೂ ನೆಲಸಮವಾಗಬಾರದು ಎಂಬುದು ನಮ್ಮ ಬಯಕೆ ಎಂದು ಓವೈಸಿ ಇದೇ ಸಂದರ್ಭ ಹೇಳಿದ್ದಾರೆ.
ಪ್ರವಾದಿ ನಿಂದನೆಯ ವಿರುದ್ದ ಇತ್ತೀಚೆಗಷ್ಟೆ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ಮನೆಗಳನ್ನು ಅಕ್ರಮ ಕಟ್ಟಡದ ನೆಪವೊಡ್ಡಿ ಉತ್ತರ ಪ್ರದೇಶ ಸರಕಾರ ಬುಲ್ಡೋಝರ್ ಬಳಸಿ ನೆಲಸಮಗೊಳಿಸಿತ್ತು.