ಮಂಗಳೂರು : ಕಳೆದ ಹಲವು ದಿನಗಳಿಂದ ಕೋಮಾಕ್ಕೆ ಜಾರಿದ್ದು, ಇನ್ನೇನು ಬದುಕುವುದು ಸಾಧ್ಯವೇ ಇಲ್ಲ ಎಂದು ವೈದ್ಯರು ತಿಳಿಸಿದುದರಿಂದ ವೃದ್ಧೆಯೊಬ್ಬರ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಕುಟುಂಬಕ್ಕೆ ಅಚ್ಚರಿದಾಯಕ ಸಂಗತಿಯೊಂದು ನಡೆದಿದೆ. ಕೋಮಾಕ್ಕೆ ಜಾರಿದ್ದ ವೃದ್ಧೆಯನ್ನು ಮನೆಗೊಯ್ಯುವ ವೇಳೆ ಹಠಾತ್ ಚೇತರಿಸಿಕೊಂಡು, ಆರೋಗ್ಯವಂತರಾದ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯದ ಮರ್ಕಂಜ ಗ್ರಾಮದ ಪಟ್ಟೆಮನೆಯ ಹೇಮಾವತಿ ರೈ (80) ಕೋಮಾಕ್ಕೆ ತೆರಳಿ ಸಾವಿನಂಚಿನಲ್ಲಿದ್ದರು. ಅಸ್ವಸ್ಥರಾಗಿದ್ದ ಹೇಮಾವತಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾಕ್ಕೆ ಜಾರಿದ್ದ ಅವರ ಆಕ್ಸಿಜನ್ ತೆಗೆದರೆ ಬದುಕುಳಿಯುವುದು ಕಷ್ಟ, ಮನೆಗೆ ಕರೆದೊಯ್ಯುವುದು ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಅವರನ್ನು ಮನೆಗೆ ಕರೆದೊಯ್ಯಲಾಗುತಿತ್ತು. ಈ ವೇಳೆ ಆ್ಯಂಬುಲೆನ್ಸ್ ನಲ್ಲಿ ಚೇತರಿಸಿಕೊಂಡಿದ್ದಾರೆ. ಇದೀಗ ಮನೆಯಲ್ಲಿ ಅವರಿಗೆ ಆರೈಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.