ಹಥ್ರಾಸ್ ಸಂತ್ರಸ್ತೆ ಕುಟುಂಬಕ್ಕೆ ದಿಗ್ಬಂಧನ: ಕೋರ್ಟ್ ಗೆ ಹೋಗುವುದಾಗಿ ಕಾಂಗ್ರೆಸ್ ಬೆದರಿಕೆ

Prasthutha|

ಲಕ್ನೊ: ಹಥ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಯಾವುದೇ ಸಂಪರ್ಕವಿಲ್ಲದೆ ದಿಗ್ಬಂಧನದಲ್ಲಿ ಮುಂದುವರಿಸಿದರೆ ನ್ಯಾಯಾಲಯಕ್ಕೆ ತೆರಳುವುದಾಗಿ ಕಾಂಗ್ರೆಸ್ ಬೆದರಿಕೆ ಹಾಕಿದೆ.

- Advertisement -

ಮಾಧ್ಯಮ ಮತ್ತು ರಾಜಕಾರಣಿಗಳು ಹಥ್ರಾಸ್ ಗ್ರಾಮವನ್ನು ಪ್ರವೇಶಿಸುವುದರಿಂದ ತಡೆಯಲಾಗಿದೆ. ತಕ್ಷಣವೇ ಈ ತಡೆಯನ್ನು ತೆಗೆಯುವಂತೆ ಕಾಂಗ್ರೆಸ್ ಯೋಗಿ ಸರಕಾರವನ್ನು ಕೇಳಿದೆ.

ಹಥ್ರಾಸ್ ಸಂತ್ರಸ್ತ ಕುಟುಂಬವನ್ನು ದಿಗ್ಬಂಧನದಲ್ಲಿ ಇಟ್ಟ ಕುರಿತು ಕಪಿಲ್ ಸಿಬಾಲ್ ರ ಜೊತೆ ಮಾತನಾಡಲಾಗಿದೆ. ವಕೀಲರು, ವೈದ್ಯರು, ಮಾಧ್ಯಮ ಅಥವಾ ಹಿತೈಷಿಗಳು ಭೇಟಿಯಾಗುವುದನ್ನು ತಡೆಹಿಡಿಯಲಾಗಿದೆ” ಎಂದು ಕಾಂಗ್ರೆಸ್ ನಾಯಕ ವಿವೇಕ್ ತಂಖಾ ಟ್ವೀಟ್ ನಲ್ಲಿ ಹೇಳಿದ್ದಾರೆ.

Join Whatsapp