October 5, 2020

ಹಥ್ರಾಸ್ ಪ್ರಕರಣವನ್ನು ಕೈಗೆತ್ತಿಕೊಳ್ಳಲಿರುವ ನಿರ್ಭಯಾ ವಕೀಲೆ

ಹೊಸದಿಲ್ಲಿ: 2012ರ ದಿಲ್ಲಿ ಸಾಮೂಹಿಕ ಅತ್ಯಾಚಾರದ ಬಲಿಪಶು ನಿರ್ಭಯಾ ಪ್ರಕರಣದ ವಕೀಲೆ ಸೀಮಾ ಕುಶ್ವಾಹರವರು ಹಥ್ರಾಸ್ ಸಂತ್ರಸ್ತೆಯ ಪರ ವಾದಿಸಲಿದ್ದಾರೆ.

ದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತೆಯು ಸಾವನ್ನಪ್ಪಿದ ಸಮಯದಿಂದ ಕುಶ್ವಾಹ ಆಕೆಯ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಕುಶ್ವಾಹ, ಜಿಲ್ಲಾ ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಂತ್ರಸ್ತೆಯ ಕುಟುಂಬವನ್ನು ನೆರವಾಗಲು ಪೊಲೀಸರು ವಿಫಲರಾಗಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಸಂತ್ರಸ್ತೆಯ ಕುಟುಂಬವು ಗ್ರಾಮದಲ್ಲಿ ಸುರಕ್ಷಿತವಲ್ಲ ಎಂದು ಕುಶ್ವಾಹ ಹೇಳಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ