ಸೌದಿ ಅರೇಬಿಯಾ | ಅಪಘಾತದಲ್ಲಿ ಮೃತರಾದ ಉಪ್ಪಳದ ವ್ಯಕ್ತಿಯ ದಫನ ಕ್ರಿಯೆಗೆ ನೆರವಾದ ಐ.ಎಸ್.ಎಫ್

Prasthutha|

ಇತ್ತೀಚೆಗೆ  ಸೌದಿ ಅರೇಬಿಯಾದಲ್ಲಿ ಅಪಘಾತವೊಂದರಲ್ಲಿ ಮೃತರಾದ  ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರ ದಫನ ಕ್ರಿಯೆ ನಡೆಸಲು ಇಂಡಿಯನ್ ಸೋಶಿಯಲ್ ಫಾರಂ ಕಾರ್ಯಕರ್ತರು‌ ನೆರವಾಗಿದ್ದಾರೆ. 

- Advertisement -

ಉಪ್ಪಳದ ಮೂಸೊಡಿ‌ ನಿವಾಸಿಯಾದ ಮೂಸಾ ಮೊಯಿದಿನ್ ಕುಞ್ಞ ಎಂಬವರು  ತಾಯಿಫ್ ನ ವಾದಿ ಲಿಸಾ ಎಂಬಲ್ಲಿ ಅಪಘಾತದಲ್ಲಿ ನಿಧನರಾಗಿದ್ದರು.

ಅಪಘಾತ ನಡೆದ ಸ್ಥಳದಿಂದ ಸುನ್ನಿ ಸೆಂಟರ್ ನ ಕಾರ್ಯಕರ್ತರೊಬ್ಬರು ತಾಯಿಫ್ ಘಟಕದ ಐ.ಎಸ್.ಎಫ್(ಇಂಡಿಯನ್ ಸೋಷಿಯಲ್ ಫಾರಂ) ನ ಸಹಾಯ ಕೋರಿದಾಗ ತಕ್ಷಣ ಕಾರ್ಯ ಪ್ರವೃತ್ತರಾದ ಐ.ಎಸ್.ಎಫ್ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ನಂತರ ದಫನ ಕ್ರಿಯೆಗೆ ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ.

- Advertisement -

ಐ.ಎಸ್.ಎಫ್ ಕಾರ್ಯಕರ್ತರು ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕಿಸಿ ಪಾಸ್ ಪೋರ್ಟಿನಲ್ಲಿದ್ದ ತೊಂದರೆಗಳನ್ನು ನಿವಾರಿಸಿದರು. ನಿರಂತರ ಶ್ರಮದ ಬಳಿಕ ಮೃತದೇಹವನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ  ಐ.ಎಸ್.ಎಫ್ ಕಾರ್ಯಕರ್ತರು ಮದ್ಯಾಹ್ನದ ನಮಾಝಿನ ನಂತರ ದಫನ ಕ್ರಿಯೆ ನಡೆಸಿದ್ದಾರೆ.

ಮೊಯಿದಿನ್ ಕುಞ್ಞಿಯವರು ತಅಫಿಝುಲ್ ಕುರ್ ಆನ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

Join Whatsapp