ರಾಹುಲ್ ಗಾಂಧಿ ಬಂಧನ

Prasthutha|

ಹಥ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಯುವತಿಯ ಮನೆಗೆ ಭೇಟಿ ಕೊಡಲು ಮುಂದಾದ ರಾಹುಲ್ ಗಾಂಧಿಯನ್ನು ಯುಪಿ ಪೊಲೀಸರು  ಬಂಧಿಸಿದ್ದಾರೆ.

- Advertisement -

ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಹಥ್ರಾಸ್ ನತ್ತ ತೆರಳುವ ವೇಳೆ ಅವರ ವಾಹನವನ್ನು ನೋಯ್ಡಾದಲ್ಲಿ ತಡೆಯಲಾಗಿದೆ. ಕಾರಿನಿಂದಿಳಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಕಾಲ್ನಡಿಗೆಯಿಂದ ಹಥ್ರಾಸ್ ನತ್ತ ತೆರಳಿದ್ದು, ಈ ವೇಳೆ ನೂಕು ನುಗ್ಗಲು ಉಂಟಾಗಿದೆ.
“ನನ್ನನ್ನು ಯಾಕಾಗಿ ಬಂಧಿಸುತ್ತಿದ್ದೀರಿ.ದಯವಿಟ್ಟು ಮಾಧ್ಯಮಗಳಿಗೆ ತಿಳಿಸಿ” ಎಂದು ಆಗ ರಾಹುಲ್ ಗಾಂಧಿ ಪೊಲೀಸರನ್ನು ಕೇಳಿದ್ದಾರೆ. ಅಧಿಕೃತ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ 188ನೆ ವಿಧಿಯಡಿ ಬಂಧಿಸಲಾಗುತ್ತಿದೆ ಎಂಬುದಾಗಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

“ನನ್ನನ್ನು ಪೊಲೀಸರು ನೆಲಕ್ಕೆ ದೂಡಿದ್ದು, ನನ್ನ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

ಏತನ್ಮಧ್ಯೆ, ಪ್ರಕರಣದ ಮರಣೋತ್ತರ ವರದಿ ಬಿಡುಗಡೆಯಾಗಿದ್ದು, ಬಾಲಕಿಯನ್ನು ಕತ್ತು ಹಿಸುಕಿ ಬೆನ್ನು ಮೂಳೆಗೆ ಗಾಯ ಮಾಡಲಾಗಿದೆ ಎಂದು ಮರಣೋತ್ತರ ವರದಿ ಹೇಳಿದೆ.

Join Whatsapp