ರಾಹುಲ್ ಗಾಂಧಿಗೆ ಪಾಪ್ಯುಲರ್ ಫ್ರಂಟ್ ಜೊತೆ ಸಹಾನುಭೂತಿಯಿದೆ: ಯೋಗಿ ಆದಿತ್ಯನಾಥ್

Prasthutha|


ಲಕ್ನೋ : ಹಥ್ರಾಸ್ ನಲ್ಲಿ ಮೇಲ್ಜಾತಿಯ ಯುವಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ದಲಿತ ಬಾಲಕಿಯ ಮನೆಗೆ ಭೇಟಿ ನೀಡಲು ತೆರಳುತ್ತಿದ್ದಾಗ ಬಂಧಿತನಾಗಿ ಯುಎಪಿಎ ಆರೋಪದ ಮೇಲೆ ಜೈಲಿನಲ್ಲಿರುವ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರ ಕುಟುಂಬವನ್ನು ರಾಹುಲ್ ಗಾಂಧಿ ಸಂದರ್ಶಿಸಿರುವುದನ್ನು ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಪಾಪ್ಯುಲರ್ ಫ್ರಂಟ್ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

- Advertisement -


ಬುಲಂದ್ ಶಹರ್ ನಲ್ಲಿ ಉಪ ಚುನಾವಣೆ ಪ್ರಚಾರ ಭಾಷಣವನ್ನು ಮಾಡುತ್ತಾ ಯೋಗಿ ಈ ರೀತಿ ಹೇಳಿದ್ದಾರೆ. ನಿನ್ನೆ ವಯನಾಡ್ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದೀಕ್ ಕಾಪ್ಪನ್ ಅವರಿಗೆ ನ್ಯಾಯ ಒದಗಿಸುವಲ್ಲಿ ಮಧ್ಯಪ್ರವೇಶಿಸುವಂತೆ ಅವರ ಪತ್ನಿ ರೈಹಾನತ್ ರಾಹುಲ್ ಗಾಂಧಿಗೆ ಮನವಿ ಸಲ್ಲಿಸಿದ್ದರು.
ನಿಮಗೆ ತಿಳಿದಿರುವಂತೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಾಪ್ಯುಲರ್ ಫ್ರಂಟ್ ನೊಂದಿಗೆ ಸಂಬಂಧವಿರುವವರನ್ನು ಸಂದರ್ಶಿಸಿದ್ದಾರೆ. ಸಂಘರ್ಷಗಳನ್ನು ಸೃಷ್ಟಿಸುವವರ ಬಗ್ಗೆ ಕಾಂಗ್ರೆಸ್ ಗೆ ಅನುಭೂತಿ ಇದೆ. ಸಮಾಜವಾದಿ ಪಕ್ಷ ಸೇರಿದಂತೆ ಅನೇಕರು ಅಂತಹಾ ಜನರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ ಎಂದು ಯೋಗಿ ಹೇಳಿದ್ದಾರೆ.

Join Whatsapp