ಮಹಿಳೆಯರ ವಿರುದ್ಧ ಕೌಟುಂಬಿಕ ಹಿಂಸೆ: ಮಹಿಳಾ ಆಯೋಗಕ್ಕೆ 5 ಸಾವಿರ ದೂರು

Prasthutha|

ನವದೆಹಲಿ: 2020ರಲ್ಲಿಯೂ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆ ಪ್ರಕರಣಗಳು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಳವಳಕ್ಕೆ ಕಾರಣವಾಗಿದೆ. ಪ್ರಸಕ್ತ ವರ್ಷದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ(ಎನ್.ಸಿ.ಡಬ್ಲ್ಯು) ದಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿ 5,000ಕ್ಕೂ ಅಧಿಕ ದೂರುಗಳು ದಾಖಲಾಗಿವೆ.

ಕೋವಿಡ್-19 ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್, ಮಹಿಳೆಯರು ತಮಗೆ ಕಿರುಕುಳ ನೀಡುವವರೊಂದಿಗೆ ಮನೆಯಲ್ಲಿಯೇ ಇರುವಂತೆ ಅನಿವಾರ್ಯವಾಗಿಸಿತ್ತು. ಲಾಕ್ ಡೌನ್ ಹೇರಿಕೆಯ ಬಳಿಕ ಎನ್.ಸಿ.ಡಬ್ಲ್ಯುಗೆ ಕೌಟುಂಬಿಕ ಹಿಂಸಾಚಾರದ ಬಗ್ಗೆ ಬಹಳಷ್ಟು ದೂರುಗಳು ಬಂದಿತ್ತು.

- Advertisement -

ಕೌಟುಂಬಿಕ ಹಿಂಸೆಯ ದೂರುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಜುಲೈ ತಿಂಗಳಿನಲ್ಲಿ ಅತ್ಯಧಿಕ ಅಂದರೆ 660ರಷ್ಟು ದೂರುಗಳು ದಾಖಲಾಗಿದ್ದವು.

“ಲಾಕ್ ಡೌನ್ ಕಾರಣದಿಂದಾಗಿ ಸಂತ್ರಸ್ತರು ನೆರವಿಗಾಗಿ ತಮ್ಮ ಕುಟಂಬ ಸದಸ್ಯರನ್ನು ಸಂಪರ್ಕಿಸಲು ಕಷ್ಟವಾಗಿತ್ತು. ಸರಣಿ ಲಾಕ್ ಡೌನ್ ಗಳು ಕೌಟುಂಬಿಕ ಹಿಂಸೆ ಪ್ರಕರಣಗಳನ್ನು ದಾಖಲಿಸುವುದಕ್ಕೂ ಅಡ್ಡಿಯಾಯಿತು. ಹಿಂಸಾಚಾರ ಮತ್ತು ಕಿರುಕುಳ ಸಂದರ್ಭಗಳಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗದೇ ಮಹಿಳೆಯರು ಅಸಹಾಯಕರಾಗಿದ್ದರು” ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

- Advertisement -