ಮರಾಠಿಗೆ ಅವಮಾನ | ಕುಮಾರ್ ಸಾನು ಮಗ, ಬಿಗ್ ಬಾಸ್ ಸ್ಪರ್ಧಿ ಜಾನ್ ವಿರುದ್ಧ ಶಿವಸೇನೆ, ಎಂಎನ್ ಎಸ್ ಗರಂ

Prasthutha|

ಮುಂಬೈ : ಬಿಗ್ ಬಾಸ್ 14ರಲ್ಲಿ ಖ್ಯಾತ ಗಾಯಕ ಕುಮಾರ್ ಸಾನು ಅವರ ಮಗ ಜಾನ್ ಕುಮಾರ್ ಸಾನು ಮರಾಠಿ ಭಾಷೆಯ ವಿಷಯದಲ್ಲಿ ವಿವಾದವೊಂದನ್ನು ಮೈಗೆಳೆದುಕೊಂಡಿದ್ದಾರೆ. ಜಾನ್ ಅವರು 24 ಗಂಟೆಯೊಳಗೆ ಕ್ಷಮೆಯಾಚಿಸದಿದ್ದಲ್ಲಿ, ಕಾರ್ಯಕ್ರಮದ ಶೂಟಿಂಗ್ ನಿಲ್ಲಿಸುವುದಾಗಿ ಮರಾಠಿ ಭಾಷಾ ಹೋರಾಟ ರಾಜಕೀಯ ಪಕ್ಷಗಳಾರ ಶಿವಸೇನೆ, ಎಂಎನ್ ಎಸ್ ಎಚ್ಚರಿಕೆ ನೀಡಿವೆ.

- Advertisement -

ಕಾರ್ಯಕ್ರಮದಲ್ಲಿ ಜಾನ್ ಕುಮಾರ್ ಸಾನು ಸಹ ಸ್ಪರ್ಧಿ ಜೊತೆ ಮಾತನಾಡುತ್ತಾ, ತನ್ನೊಂದಿಗೆ ಮರಾಠಿಯಲ್ಲಿ ಮಾತನಾಡದಂತೆ ತಿಳಿಸಿರುವುದು ಆಡಳಿತಾರೂಢ ಶಿವಸೇನೆ ಮತ್ತು ಎಂಎನ್ ಎಸ್ ಗೆ ಆಕ್ರೋಶವನ್ನುಂಟು ಮಾಡಿದೆ.

ಜಾನ್ ಕ್ಷಮೆ ಯಾಚಿಸದಿದ್ದಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ಕಲರ್ಸ್ ಚಾನೆಲ್ ಕಠಿಣ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಶಿವಸೇನೆ ಮುಖಂಡ ಪ್ರತಾಪ್ ಸರ್ನಾಯ್ಕ್, ಎಂಎನ್ ಎಸ್ ನಾಯಕ ಅಮೆ ಖೋಪ್ಕರ್ ಎಚ್ಚರಿಕೆ ನೀಡಿದ್ದಾರೆ.   

Join Whatsapp