ಮಧ್ಯಪ್ರದೇಶ : ಮತ್ತೋರ್ವ ಕಾಂಗ್ರೆಸ್ ಶಾಸಕ ಬಿಜೆಪಿಗೆ ಸೇರ್ಪಡೆ

Prasthutha|

ಭೋಪಾಲ್ : ಮಧ್ಯಪ್ರದೇಶ ಕಾಂಗ್ರೆಸ್ ಗೆ ಮತ್ತೊಂದು ಭಾರಿ ಹಿನ್ನಡೆಯಾಗಿದೆ. ಪಕ್ಷದ ದಾಮೋ ಕ್ಷೇತ್ರದ ಶಾಸಕ ರಾಹುಲ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಉಪ ಚುನಾವಣೆ ನಡೆಯಲು ಒಂದು ವಾರವಷ್ಟೇ ಬಾಕಿಯಿರುವಾಗ ಮತ್ತೊಂದು ಶಾಸಕ ಸ್ಥಾನ ತೆರವಾಗಿರುವುದರಿಂದ, ಆ ಕ್ಷೇತ್ರಕ್ಕೆ ಮತ್ತೊಮ್ಮೆ ಚುನಾವಣೆ ನಡೆಸುವ ಅನಿವಾರ್ಯತೆ ಚುನಾವಣಾ ಆಯೋಗಕ್ಕೆ ಎದುರಾಗಿದೆ.

- Advertisement -

ಸಿಂಗ್ ಅವರ ರಾಜೀನಾಮೆ ಸ್ವೀಕಾರವಾಗಿದೆ ಎಂದು ಹಂಗಾಮಿ ಸ್ಪೀಕರ್ ರಾಮೇಶ್ವರ್ ಶರ್ಮಾ ಹೇಳಿದ್ದಾರೆ. ಆ ನಂತರ ಸಿಂಗ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ. ಶರ್ಮಾ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಮ್ಮುಖದಲ್ಲಿ ಅವರು ಪಕ್ಷ ಸೇರಿದ್ದಾರೆ.

ಕಳೆದ ಮಾರ್ಚ್ ಬಳಿಕ, ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ 26ನೇ ಶಾಸಕರಾಗಿ ಸಿಂಗ್ ಗುರುತಿಸಿಕೊಂಡಿದ್ದಾರೆ. ಕಮಲನಾಥ್ ಸರಕಾರವನ್ನು ಕೆಳಗುರುಳಿಸಲು ಜ್ಯೋತಿರಾದಿತ್ಯ ಸಿಂದ್ಯಾ ನೇತೃತ್ವದಲ್ಲಿ 22 ಶಾಸಕರು ರಾಜೀನಾಮೆ ನೀಡಿದ್ದರು.

Join Whatsapp