ಮಥುರಾ ಈದ್ಗಾ ಮಸೀದಿ ಕೆಡವುವಂತೆ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ.

Prasthutha|


ಮಥುರಾ : ಮಥುರಾ ಶ್ರೀ ಕೃಷ್ಣ ದೇವಸ್ಥಾನದ ಬಳಿ ಇರುವ ಶತಮಾನಗಳಷ್ಟು ಹಳೆಯದಾದ ಶಾಹಿ ಈದ್ಗಾ ಮಸೀದಿಯನ್ನು ಕೆಡವಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿದ ಮಥುರಾ ನ್ಯಾಯಾಲಯದ ತೀರ್ಪಿನ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಆರಾಧನಾಲಯಗಳಿಗೆ ಸಂಬಂಧಿಸಿದ ಕಾನೂನಿನ ನಿಬಂಧನೆಗಳನ್ನು ಉಲ್ಲೇಖಿಸಿ ಸಲ್ಲಿಸಿದ್ದ ಅರ್ಜಿಯನ್ನು ಸೆಪ್ಟೆಂಬರ್ 30ರಂದು ಮಥುರಾ ನ್ಯಾಯಾಲಯ ತಿರಸ್ಕರಿಸಿತ್ತು. ಇದರ ವಿರುದ್ಧ ಅರ್ಜಿದಾರರು ಜಿಲ್ಲಾ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.
ಸಂವಿಧಾನದ 25ನೇ ವಿಧಿಯನ್ನು ಉಲ್ಲೇಖಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಧರ್ಮವನ್ನು ಪ್ರಚಾರ ಮಾಡುವ ಮತ್ತು ಕಲಿಸುವ ಸ್ವಾತಂತ್ರ್ಯ ಎಲ್ಲಾ ನಾಗರಿಕರಿಗೆ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
“ದೇವಾಲಯದ ಕಳೆದು ಹೋದ ವೈಭವವನ್ನು ಮರಳಿ ತರಲು ಮತ್ತು ದೇವಾಲಯವನ್ನು ನಿರ್ವಹಿಸುವ ಅಧಿಕಾರವೂ ವಿಶ್ವಾಸಿಗಳಿಗೆ ಇದೆ. ಇದನ್ನು ಸಂವಿಧಾನವು ಖಾತರಿಪಡಿಸುತ್ತದೆ. ಈದ್ಗಾ ಇರುವುದು ಕೃಷ್ಣನ ಜನ್ಮಸ್ಥಳದಲ್ಲಾಗಿದೆ. ಮಸೀದಿಯನ್ನು ಕೆಡವಿದರೆ ಅದನ್ನು ಕಾಣಬಹುದು. ಆ ಅತಿಕ್ರಮಣಗಳನ್ನು ಸ್ಥಳಾಂತರಿಸಬೇಕು” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
“ಮಥುರಾದಲ್ಲಿನ ಕೃಷ್ಣ ದೇವಾಲಯವನ್ನು ಮೊಘಲ್ ಆಕ್ರಮಣಕಾರ ಔರಂಗಜೇಬನು ಧ್ವಂಸ ಮಾಡಿದ್ದ ಮತ್ತು 1669-70ರಲ್ಲಿ ಕತ್ರಿ ಕೇಶವ್ ದೇವಿಯಲ್ಲಿರುವ ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿರುವ ದೇವಾಲಯವನ್ನು ಧ್ವಂಸ ಮಾಡಲು ಆದೇಶ ಹೊರಡಿಸಿದ್ದ” ಎಂದು ಅರ್ಜಿದಾರರು ವಾದಿಸಿದ್ದಾರೆ.

Join Whatsapp