ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿ ವಿದ್ಯುತ್ ಮರುಪೂರೈಕೆ | ವ್ಯಾಪಾರ-ವಹಿವಾಟು ಆರಂಭ

Prasthutha|

ಮಂಗಳೂರು : ಕೇಂದ್ರ ಮಾರುಕಟ್ಟೆಯಲ್ಲಿ ವಿದ್ಯುತ್ ಮರುಪೂರೈಕೆ ಆಗಿರುವುದರಿಂದ, ಮಾರುಕಟ್ಟೆಯ ಹೊರವರ್ತುಲದ ಕೆಲವು ಅಂಗಡಿ ಮಾಲಕರು ಇಂದು ಮುಂಜಾನೆಯಿಂದ ವ್ಯವಹಾರ ಆರಂಭಿಸಿದ್ದಾರೆ. ಕೋರ್ಟ್ ನಿರ್ದೇಶನದಂತೆ, ಮಾರುಕಟ್ಟೆ ಕಟ್ಟಡದಲ್ಲಿ ವ್ಯವಹಾರ ನಡೆಸಲು ಇಚ್ಛಿಸುವವರಿಗೆ ವ್ಯವಹಾರ ನಡೆಸಲು ಅನುಮತಿ ನೀಡಲು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿರುವ ಅಧಿಕೃತ ವ್ಯಾಪಾರಸ್ಥರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಲವು ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಬಣ್ಣ ಬಳಿಯುವ ಮತ್ತು ಇತರ ರಿಪೇರಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ದಾಖಲೆಗಳ ಆಧಾರದಲ್ಲಿ ಕೇವಲ 33 ಮಂದಿ ಅಧಿಕೃತ ವ್ಯಾಪಾರಸ್ಥರು ಮಾತ್ರ ಇಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ 33 ಮಂದಿಗೆ ವ್ಯವಹಾರ ನಡೆಸಲು ಅನುಮತಿ ನೀಡಲು ಪಾಲಿಕೆ ನಿರ್ಧರಿಸಿದೆ ಎನ್ನಲಾಗಿದೆ.

- Advertisement -

ಮಹಾನಗರ ಪಾಲಿಕೆ ಆದೇಶದ ಮೇರೆಗೆ ಸ್ಥಗಿತಗೊಂಡಿದ್ದ ವಿದ್ಯುತ್ ಪೂರೈಕೆಯನ್ನು ಕೇಂದ್ರ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಮನವಿಯ ಮೇರೆಗೆ ಮರುಪೂರೈಸಲಾಗಿದೆ.

- Advertisement -