ಮಂಗಳೂರಿನಲ್ಲಿ ಇಂದಿನಿಂದ ಮೀನುಗಾರಿಕೆ ಆರಂಭ | ಮೀನುಗಾರರು ಸಜ್ಜು

Prasthutha|

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ (ಸೆ.1) ಮೀನುಗಾರಿಕೆ ಅವಧಿ ಆರಂಭವಾಗಲಿದೆ. ಮೀನುಗಾರಿಕೆ ದೋಣಿಗಳನ್ನು ಸಮುದ್ರಕ್ಕೆ ಇಳಿಯಲು ಸಿದ್ಧವಾಗಿರಿಸಲಾಗಿದೆ. ಲಾಕ್ ಡೌನ್ ನಿಂದಾಗಿ ತಮ್ಮ ಊರುಗಳಿಗೆ ತೆರಳಿದ್ದ ಹೊರ ರಾಜ್ಯದ ಕಾರ್ಮಿಕರು ಈಗ ಮತ್ತೆ ವಾಪಾಸ್ ಆಗುತ್ತಿದ್ದಾರೆ. ಆಳ ಸಮುದ್ರದ ಮೀನುಗಾರಿಕೆಗೆ ಈಗ ಸಿದ್ಧರಾಗಿದ್ದಾರೆ.

- Advertisement -

ಜಿಲ್ಲೆಯಲ್ಲಿ ಆಳ ಸಮುದ್ರದ ಮೀನುಗಾರಿಕೆಯಲ್ಲಿ ತೊಡಗಿರುವ ಸುಮಾರು 12,000 ಕಾರ್ಮಿಕರು ಹೊರ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರು ಹೆಚ್ಚು ಪ್ರಮಾಣದಲ್ಲಿದ್ದಾರೆ.

ಪ್ರಸ್ತುತ ನಿಯಮಗಳ ಪ್ರಕಾರ, ಯಾವುದೇ ಸೋಂಕು ಲಕ್ಷಣ ಇಲ್ಲದವರು ಕ್ವಾರಂಟೈನ್ ಗೊಳಗಾಗದೆ, ನೇರವಾಗಿ ಮೀನುಗಾರಿಕೆಯಲ್ಲಿ ತೊಡಗಬಹುದಾಗಿದೆ. ತವರಿಗೆ ಹೋದ ಕಾರ್ಮಿಕರಲ್ಲಿ ಶೇ.25ರಷ್ಟು ಕಾರ್ಮಿಕರು ಈಗಾಗಲೇ ವಾಪಾಸ್ ಬಂದಿದ್ದಾರೆ ಎನ್ನಲಾಗಿದೆ.

- Advertisement -

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ಈ ವರ್ಷ ಮೀನುಗಾರಿಕೆ ಅವಧಿ ಆರಂಭಿಸುವುದಕ್ಕೆ ಒಂದು ತಿಂಗಳು ವಿಳಂಬ ಮಾಡಲಾಗಿತ್ತು. ಮೀನುಗಾರಿಕೆ ನಿಷೇಧದ ಸಮಯದಲ್ಲಿ ತಮಿಳುನಾಡಿನಿಂದ ಮೀನುಗಲನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸರಬರಾಜು ಮಾಡಲಾಗಿತ್ತು. ಈ ಸಂದರ್ಭ ಮೀನಿನ ಬೆಲೆ ದುಬಾರಿಯಾಗಿತ್ತು.

Join Whatsapp