ಭಾರತದ ಪ್ರಜಾಪ್ರಭುತ್ವ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ : ಸೋನಿಯಾ ಗಾಂಧಿ

Prasthutha|

ನವದೆಹಲಿ : ಭಾರತೀಯ ಪ್ರಜಾಪ್ರಭುತ್ವವು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗಳ ಪರವಾಗಿ ಹೋರಾಟದಲ್ಲಿ ನಿರತರಾಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. ಬಿಹಾರ ವಿಧಾನಸಭೆ ಮತ್ತು ವಿವಿಧ ರಾಜ್ಯಗಳಲ್ಲಿನ ಉಪ ಚುನಾವಣೆಗಳ ಹಿನ್ನೆಲೆಯಲ್ಲಿ, ಸಭೆ ಪ್ರಾಮುಖ್ಯತೆಯನ್ನು ಪಡೆದಿದೆ.

- Advertisement -

ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ತಮ್ಮ ಪಕ್ಷದ ಉದ್ದೇಶ ದೇಶಕ್ಕಾಗಿ ಹೋರಾಡುತ್ತಿರುವುದು ಎಂದು ಸೋನಿಯಾ ತಿಳಿಸಿದ್ದಾರೆ. “ನಮ್ಮ ದೇಶ ಎದುರಿಸುತ್ತಿರುವ ಇಂತಹ ಸಂದಿಗ್ಧ ಸಂದರ್ಭದಿಂದ ಹೊರಬರಲು ಕಾಂಗ್ರೆಸ್ ಪಕ್ಷದ ಎಲ್ಲಾ ಅನುಭವಸ್ಥ ನಾಯಕರು ಕಠಿಣ ಪರಿಶ್ರಮ ಪಡಲಿದ್ದಾರೆ’’ ಎಂದು ಸೋನಿಯಾ ಹೇಳಿದ್ದಾರೆ.

Join Whatsapp