ಭಾರತದ ಪುತ್ರಿಯರ ವಿವಾಹ ವಯಸ್ಸನ್ನು ಸರಕಾರ ನಿರ್ಧರಿಸಲಿದೆ: ಮೋದಿ

Prasthutha|

ಹೊಸದಿಲ್ಲಿ: ಸಂಬಂಧಿಸಿದ ಸಮಿತಿಯು ತನ್ನ ವರದಿಯನ್ನು ನೀಡಿದ ಬಳಿಕ ದೇಶದ ಪುತ್ರಿಯರ ಸರಿಯಾದ ಮದುವೆ ವಯಸ್ಸನ್ನು ಸರಕಾರವು ಶೀಘ್ರವೇ ನಿರ್ಧರಿಸಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

- Advertisement -

“ನಮ್ಮ ಪುತ್ರಿಯರ ಸರಿಯಾದ ವಯಸ್ಸನ್ನು ನಿರ್ಣಯಿಸುವ ಕುರಿತು ಚರ್ಚೆಗಳು ಜಾರಿಯಲ್ಲಿವೆ. ಯಾಕಾಗಿ ಸಂಬಂಧಿಸಿದ ಸಮಿತಿಯು ತನ್ನ ನಿರ್ಧಾರವನ್ನು ಇನ್ನೂ ನೀಡಿಲ್ಲ ಎಂದು ದೇಶಾದ್ಯಂತ ಪುತ್ರಿಯರು ನನಗೆ ಬರೆಯುತ್ತಿದ್ದಾರೆ. ವರದಿಯು ಬಂದ ಕೂಡಲೇ ಸರಕಾರವು ಕ್ರಮ ಕೈಗೊಳ್ಳಲಿದೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಮೋದಿ ಹೇಳಿದ್ದಾರೆ.

ಆಹಾರ ಮತ್ತು ಕೃಷಿ ಸಂಘಟನೆಯೊಂದಿಗೆ ಭಾರತದ ಸಂಬಂಧದ 75ನೆ ವಾರ್ಷಿಕ ಮಹೋತ್ಸವದ ಪ್ರಯುಕ್ತ 75 ರೂಪಾಯಿಗಳ ಮುಖಬೆಲೆಯ ನಾಣ್ಯವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

Join Whatsapp