ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 347 ಕೋಟಿ ಅನುದಾನದ ಭರವಸೆ : ಸಚ್ಚಿದಾನಂದ ಮೂರ್ತಿ

Prasthutha|

- Advertisement -

ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 347 ಕೋಟಿ ರೂ ಅನುದಾನವನ್ನು ಬಿಡುಗಡೆಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿರುವುದಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ನಡೆದ ಬ್ರಾಹ್ಮೀ ಸಭಾವನದ ಉದ್ಘಾಟಿಸಿ ಮಾತಾಡಿದ ಅವರು “ ಸಾಮೂಹಿಕ ವಿವಾಹ,ಜಿಲ್ಲೆಗೊಂದು ಬ್ರಾಹ್ಮಣ ಸಮುದಾಯ ಭವನ ಸೇರಿದಂತೆ ಕರ್ಮ ಕಟ್ಟಡ ,ವಸತಿ ಯೋಜನೆಗಳಿಗೆ ಸರ್ಕಾರ 347ಕೋಟಿ ರೂ ಹಂಚಿಕೆ ನೀಡುವುದಾಗಿ ಭರವಸೆ ನೀಡಿದೆ” ಎಂದು ಅವರು ಹೇಳಿದ್ದಾರೆ.

- Advertisement -

ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪಲಿಮಾರು ಶ್ರೀ ವಿದ್ಯಾಧೀಷ ತೀರ್ಥ ಸ್ವಾಮೀಜಿ, ಕಣಿಯೂರು ಶ್ರೀ ವಿದ್ಯಾವಾಲ್ಲಭ ತೀರ್ಥ ಸ್ವಾಮೀಜಿ ಮತ್ತು ಇನ್ನಿತರರು ಭಾಗವಹಿಸಿದ್ದರು.

Join Whatsapp