ಬೆಂಗಳೂರು | ನಾಯಿ ತೊಳೆಯಲು ಹೋಗಿದ್ದ ಅಣ್ಣ-ತಂಗಿ ಕಲ್ಲು ಕ್ವಾರಿಯಲ್ಲಿ ಮುಳುಗಿ ದುರಂತ ಸಾವು

Prasthutha|

ಬೆಂಗಳೂರು : ಉತ್ತರ ತಾಲೂಕಿನ ಬೆಟ್ಟಹಲಸೂರು ಸಮೀಪ ನಾಯಿಗೆ ಸ್ನಾನ ಮಾಡಿಸಲೆಂದು ಕಲ್ಲು ಕ್ವಾರಿಗಿಳಿದ ಅಣ್ಣ-ತಂಗಿ ದಾರುಣವಾಗಿ ಮೃತಮಟ್ಟ ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿದೆ.

- Advertisement -

ಮೃತರನ್ನು ಜೆನ್ನಿಫರ್(17) ಮತ್ತು ಪ್ರೇಮ್ ಕುಮಾರ್(21) ಎಂದು ಗುರುತಿಸಲಾಗಿದೆ. ನಾಯಿಗೆ ಸ್ನಾನ ಮಾಡಿಸಲೆಂದು ಕಲ್ಲು ಕ್ವಾರಿಗಿಳಿದಿದ್ದು, ಈ ಸಂದರ್ಭ ಜೆನ್ನಿಫರ್ ನಿಯಂತ್ರಣತಪ್ಪಿ ನೀರನಲ್ಲಿ ಮುಳುಗಿದ್ದಾರೆ. ತಕ್ಷಣ ತಂಗಿಯನ್ನು ರಕ್ಷಿಸಲೆಂದು ಹೋದ ಪ್ರೇಮ್ ಕುಮಾರ್ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಘಟನಾಸ್ಥಳಕ್ಕಾಗಮಿಸಿದ ಚಿಕ್ಕಜಾಲ ಪೊಲೀಸರು ಪರಿಶೀಲನೆ ನಡೆಸಿದರು.

Join Whatsapp