ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

Prasthutha|

ಪಾಟ್ನಾ: ಭಾರತೀಯ ಜನತಾ ಪಕ್ಷದ ನಾಯಕನೋರ್ವನನ್ನು ಬೈಕ್ ನಲ್ಲಿ ಬಂದ ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಸಮೀಪದಲ್ಲೇ ಇದ್ದ ಸಿಸಿ ಟಿವಿಯಲ್ಲಿಘಟನೆ ದಾಖಲಾಗಿದೆ.

- Advertisement -

ಸ್ಥಳೀಯ ವರದಿಗಳ ಪ್ರಕಾರ ಬಿಜೆಪಿ ನಾಯಕನನ್ನು ರಾಜೇಶ್ ಕುಮಾರ್ ಝಾ ಎಂದು ಗುರುತಿಸಲಾಗಿದೆ.

ನಗರದ ತೇಜ್ ಪ್ರತಾಪ್ ನಗರದ ಸೀತಾರಾಮ್ ಹಾಲ್ ಬಳಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹಿಂದುಸ್ಥಾನ್ ವರದಿ ಮಾಡಿದೆ.

Join Whatsapp