ಬಿಹಾರ ಚುನಾವಣೆ | ಪೌರತ್ವ ಹಕ್ಕುಗಳ ಬಗ್ಗೆ ಖಚಿತ ಪಡಿಸಿ : ರಾಜಕೀಯ ಪಕ್ಷಗಳಿಗೆ ಮುಸ್ಲಿಂ ಸಂಘಟನೆಗಳ ಆಗ್ರಹ

Prasthutha|

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಳು ಮುಸ್ಲಿಂ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಸಾರ್ವಜನಿಕ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿವೆ. ಮುಸ್ಲಿಮರಿಗೆ ನಾಗರಿಕತ್ವ ಹಕ್ಕು ಖಚಿತಪಡಿಸುಸುವುದರ ಜೊತೆ ಹಲವು ಬೇಡಿಕೆಗಳನ್ನು ಈ ಪ್ರಣಾಳಿಕೆಯಲ್ಲಿ ಮಂಡಿಸಲಾಗಿದೆ.

ಜಮಾತೆ ಉಲೆಮಾ ಇ ಹಿಂದ್ ಬಿಹಾರ ಘಟಕ ಸೇರಿದಂತೆ, ಜಮಾತೆ ಇಸ್ಲಾಮಿ ಹಿಂದ್, ಅಮರತೆ ಶರಿಯಾ, ಎದಾರ ಇ ಶರಿಯಾ, ಜಮಾತೆ ಅಹ್ಲೆ ಹದೀಸ್, ಮುಸ್ಲಿಮ್ ಮಜ್ಲಿಸೆ ಮುಶಾವರತ್ ಮತ್ತು ಮಜ್ಲಿಸೆ ಉಲೆಮಾ ವಾ ಖುತಾಬ್ ವಾ ಇಮಾಮಿಯಾ ಮುಂತಾದ ಸಂಘಟನೆಗಳು ಈ ಪ್ರಣಾಳಿಕೆಯನ್ನು ಬೆಂಬಲಿಸಿವೆ.

- Advertisement -

ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.17ರಷ್ಟಿದೆ ಮತ್ತು ಸೀಮಾಂಚಲ ಪ್ರದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.70ರಷ್ಟಿದೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ನೈಜ್ಯ ನಾಗರಿಕರಿಗಕತ್ವಕ್ಕೆ ತೊಂದರೆಯಾಗುವಂತಹ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ದೃಢಪಡಿಸಬೇಕು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಚುನಾವಣಾ ರಾಜಕಾರಣದಲ್ಲಿ ಜಾತ್ಯತೀತತೆ ಸಂಪ್ರದಾಯ ಕಾಪಾಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ವೈಯಕ್ತಿಕ ಕಾನೂನು ಮತ್ತು ಮುಸ್ಲಿಮರ ಇತರ ಧಾರ್ಮಿಕ ಸಂಪ್ರದಾಯಗಳನ್ನು ರಕ್ಷಿಸಬೇಕು. ಏಕರೂಪ ನಾಗರಿಕ ಸಂಹಿತೆ ಕುರಿತು ಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

- Advertisement -