ಬಾಲಿವುಡ್ ನಟ ಸುಶಾಂತ್ ಸಾವು ಹತ್ಯೆಯಲ್ಲ

Prasthutha|

ಹೊಸದಿಲ್ಲಿ: ಬಾಲಿವುಡ್ ನಟ ಸುಶಾಂತ್ ರಜಪೂತ್ ಸಾವು ಹತ್ಯೆಯಾಗಿರಲಿಲ್ಲ. ಬದಲಾಗಿ ಆತ್ಮಹತ್ಯೆ ಪ್ರಕರಣವಾಗಿದೆ ಎಂದು ದಿಲ್ಲಿ ಎ.ಐ.ಐ.ಎಂ.ಎಸ್ ನ ವೈದ್ಯರ ತಂಡವೊಂದು ಸಿಬಿಐಗೆ ನೀಡಿದ ತನ್ನ ಅಭಿಪ್ರಾಯದಲ್ಲಿ ತಿಳಿಸಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ. ವಿಷಪ್ರಾಶನ ಮಾಡಲಾಗಿತ್ತು ಮತ್ತು ಕತ್ತು ಹಿಸಕುಲಾಗಿತ್ತು ಎಂಬ ಕುಟುಂಬದ ಮತ್ತು ಅವರ ವಕೀಲರ ಸಿದ್ಧಾಂತವನ್ನು ಎ.ಐ.ಐ.ಎಂ.ಎಸ್ ತಳ್ಳಿಹಾಕಿದೆ.

34ರ ಹರೆಯದ ಸಿನಿಮಾ ತಾರೆ ಜೂನ್ 14ರಂದು ಮುಂಬೈಯ ತನ್ನ ಅಪಾರ್ಟ್ ಮೆಂಟ್ ನಲ್ಲಿ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆಯನ್ನು ಆಧರಿಸಿ ಮುಂಬೈ ಪೊಲೀಸರು ಇದನ್ನು ಆತ್ಮಹತ್ಯೆಯೆಂದು ಕರೆದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಊಹಾಪೋಹಗಳು ಮತ್ತು ನ್ಯಾಯಕ್ಕಾಗಿ ಅಭಿಯಾನ ನಡೆದಿದ್ದವು. ಸುಶಾಂತ್ ಕುಟುಂಬದ ಅನುಮಾನಗಳು ಒಟ್ಟು ಸಿಬಿಐ ತನಿಖೆಯ ಭಾಗವಾಗಿತ್ತು.

- Advertisement -

ಎ.ಐ.ಎಂ.ಎಂ.ಎಸ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು ಫೈಲನ್ನು ಮುಚ್ಚಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ.

- Advertisement -