ಪ್ಯಾರಿಸ್ | ಪ್ರವಾದಿ ಮುಹಮ್ಮದರ ಕಾರ್ಟೂನ್ ಪ್ರದರ್ಶನಕ್ಕೆ ಸೌದಿ ಅರೇಬಿಯಾ ಖಂಡನೆ

Prasthutha|

ರಿಯಾಧ್ : ಪ್ರವಾದಿ ಮುಹಮ್ಮದರ ಕುರಿತ ಕಾರ್ಟೂನ್ ಬಗ್ಗೆ ಸೌದಿ ಅರೇಬಿಯಾ ಖಂಡಿಸಿದೆ. ಈ ಬಗ್ಗೆ ಸೌದಿ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿಕೆ ನೀಡಿ, ಗಲ್ಫ್ ರಾಷ್ಟ್ರವು ಭಯೋತ್ಪಾದನೆಯೊಂದಿಗೆ ಇಸ್ಲಾಮ್ ಅನ್ನು ಥಳುಕು ಹಾಕುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಸ್ಕೃತಿ ಪರಸ್ಪರ ಗೌರವ, ಸಹಿಷ್ಣುತೆ ಮತ್ತು ಶಾಂತಿಯಿಂದ ಬೆಳಗುವ ದೀಪದಂತಿರಬೇಕು. ಅದು ದ್ವೇಷ, ಹಿಂಸೆ, ತೀವ್ರವಾದ ಮತ್ತು ಸಹಅಸ್ತಿತ್ವಕ್ಕೆ ತದ್ವಿರುದ್ಧವಾದ ಕ್ರಿಯೆ ಮತ್ತು ಆಚರಣೆಯನ್ನು ಒಳಗೊಂಡಿರಬಾರದು’’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

- Advertisement -

ಪ್ಯಾರಿಸ್ ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ತರಗತಿಯಲ್ಲಿ ಪ್ರವಾದಿ ಮುಹಮ್ಮದರ ಕಾರ್ಟೂನ್ ಪ್ರದರ್ಶಿಸಿದ ಶಿಕ್ಷಕನ ತಲೆ ಕತ್ತರಿಸಿದ ತೀವ್ರವಾದಿಯ ಕೃತ್ಯವೂ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದಕ ಚಟುವಟಿಕೆಗಳನ್ನು ಗಲ್ಫ್ ರಾಷ್ಟ್ರವು ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ಯಾರಿಸ್ ನಲ್ಲಿ ಪ್ರವಾದಿ ಮುಹಮ್ಮದರ ಕಾರ್ಟೂನ್ ಪ್ರದರ್ಶಿಸಿದ ವಿಷಯಕ್ಕೆ ಸಂಬಂಧಿಸಿ ಮುಸ್ಲಿಮ್ ರಾಷ್ಟ್ರಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಲವು ಗಲ್ಫ್ ರಾಷ್ಟ್ರಗಳಲ್ಲಿ ಮತ್ತು ಟರ್ಕಿಯಲ್ಲಿ ಫ್ರಾನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ.      

- Advertisement -