ಪಂಪ್ ವೆಲ್ ಮಸ್ಜಿದ್ ಗೆ ಸೋಡಾ ಬಾಟಲಿ ಎಸೆದ ದುಷ್ಕರ್ಮಿಗಳು | ಸ್ಥಳಕ್ಕೆ ಪೊಲೀಸರ ಭೇಟಿ

Prasthutha|

ಮಂಗಳೂರು : ರಾ.ಹೆ. 66 ಪಂಪ್ ವೆಲ್ ಬಳಿಯಿರುವ ನಗರದ ಸುಂದರ ಮಸೀದಿಗಳಲ್ಲಿ ಒಂದಾಗಿರುವ ಮಸ್ಜಿದುತ್ತಖ್ವಾದ ಮೇಲೆ ಶನಿವಾರ ನಸುಕಿನ ವೇಳೆ ಸೋಡಾ ಬಾಟಲಿ ಎಸೆದಿರುವ ಘಟನೆ ನಡೆದಿದೆ. ನಸುಕಿನ ವೇಳೆ 3:40ರ ಸುಮಾರಿಗೆ ಮಸೀದಿಯ ಎಡಭಾಗದಲ್ಲಿ ನಿಂತು ದುಷ್ಕರ್ಮಿಗಳು ಬಾಟಲಿ ಎಸೆದಿದ್ದಾರೆ ಎನ್ನಲಾಗಿದೆ.
ಮಸೀದಿಯ ಕಾವಲುಗಾರರ ಕಣ್ತಪ್ಪಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಕಾವಲುಗಾರರು ಬೆಳಗ್ಗೆ ಮಸೀದಿಯ ಮಹಡಿ ಹತ್ತಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಅವರು ಮಸೀದಿಯ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸರು ಮಸೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಕೆಲವು ದಿನಗಳ ಹಿಂದೆಯಷ್ಟೇ ಪಾಂಡೇಶ್ವರದ ಮೌಲಾನಾ ಕಲಾಂ ಆಜಾದ್ ಭವನಕ್ಕೆ ದುಷ್ಕರ್ಮಿಗಳ ತಂಡವೊಂದು ಕಲ್ಲೆಸೆದಿತ್ತು. ಈ ಸಂಬಂಧ ಕೆಲವರ ಬಂಧನವೂ ನಡೆದಿದೆ. ಇದೀಗ ಮತ್ತೊಮ್ಮೆ ಇಂತಹ ದುಷ್ಕೃತ್ಯ ಎಸಗಲಾಗಿದೆ.

Join Whatsapp