ನ್ಯೂಝಿಲ್ಯಾಂಡ್ ಚುನಾವಣೆ | ಜೆಸಿಂಡಾ ಆರ್ಡೆರ್ನ್ ಗೆ ಎರಡನೇ ಬಾರಿಗೆ ಅಧಿಕಾರ ಖಚಿತ | ಲೇಬರ್ ಪಾರ್ಟಿಗೆ ಭಾರೀ ಬಹುಮತ

Prasthutha News

ವೆಲ್ಲಿಂಗ್ಟನ್ : ನ್ಯೂಝಿಲ್ಯಾಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಎರಡನೇ ಬಾರಿಗೆ ಅಧಿಕಾರಕ್ಕೇರುವ ಎಲ್ಲಾ ಸಾಧ್ಯತೆಗಳು ಕಂಡುಬಂದಿದ್ದು, ಅಧ್ಯಕ್ಷೆ ಜೆಸಿಂಡಾ ಆರ್ಡೆರ್ನ್ ಮತದಾರರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಅಧ್ಯಕ್ಷೆ ಜೆಸಿಂಡಾ ಅವರ ಲೇಬರ್ ಪಾರ್ಟಿ ಬಹುತೇಕ ಮತಎಣಿಕೆಯ ಬಳಿಕ ಭಾರೀ ಮುನ್ನಡೆ ಸಾಧಿಸಿದೆ.

ಶೇ.90ರಷ್ಟು ಮತ ಎಣಿಕೆ ಮುಗಿದಿದ್ದು ಲೇಬರ್ ಪಕ್ಷ ಶೇ.49 ಮತಗಳನ್ನು ಪಡೆದಿದೆ. ಪ್ರತಿಪಕ್ಷ ನ್ಯಾಶನಲ್ ಪಾರ್ಟಿ ಶೇ.27ರಷ್ಟು ಮತಗಳನ್ನು ಪಡೆದಿದೆ. ನ್ಯೂಝಿಲ್ಯಾಂಡ್ ಸಂಸತ್ತಿನ 120 ಸ್ಥಾನಗಳಲ್ಲಿ ಲೇಬರ್ ಪಕ್ಷ 64 ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ ಮತ್ತು ನ್ಯಾಶನಲ್ ಪಾರ್ಟಿ 35 ಸ್ಥಾನಗಳನ್ನು ಪಡೆಯಲಿದೆ. ಕಳೆದ 50 ವರ್ಷಗಳಲ್ಲಿ ಲೇಬರ್ ಪಕ್ಷದ ಅತ್ಯುನ್ನತ ಸಾಧನೆ ಇದಾಗಿದೆ.

ಪ್ರತಿಪಕ್ಷ ನಾಯಕಿ ಜುಡಿತ್ ಕಾಲಿನ್ಸ್ ಭಾರೀ ವಿಜಯ ಸಾಧಿಸಿದ ಆರ್ಡೆನ್ ಅವರನ್ನು ಅಭಿನಂದಿಸಿದ್ದಾರೆ. ಈ ಭಾರೀ ಬಹುಮತದಿಂದಾಗಿ ಹಲವು ದಶಕಗಳ ಬಳಿಕ ಇದೇ ಮೊದಲ ಬಾರಿ ಲೇಬರ್ ಪಾರ್ಟಿ ಏಕಾಂಗಿಯಾಗಿ ಅಧಿಕಾರ ನಡೆಸಲು ಸಾಧ್ಯವಾಗಲಿದೆ.


Prasthutha News