ದೇವೇಂದ್ರ ಫಡ್ನವೀಸ್ ನನ್ನ ಜೀವನ ನಾಶ ಮಾಡಿದರು : ಏಕನಾಥ ಖಾಡ್ಸೆ

Prasthutha|

ಮುಂಬೈ : ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ಜೀವನವನ್ನು ನಾಶ ಮಾಡಿದರು ಎಂದು ಹಿರಿಯ ಬಿಜೆಪಿ ನಾಯಕ ಏಕನಾಥ ಖಾಡ್ಸೆ ಆರೋಪಿಸಿದ್ದಾರೆ. ಬಿಜೆಪಿ ತೊರೆಯಲು ನಿರ್ಧರಿಸಿರುವ ಖಾಡ್ಸೆ, ಶುಕ್ರವಾರ ಎನ್ ಸಿಪಿ ಸೇರ್ಪಡೆಯಾಗಲಿದ್ದಾರೆ. ಈ ನಡುವೆ ಬಿಜೆಪಿಯ ಮಾಜಿ ಸಿಎಂ ವಿರುದ್ಧ ಖಾಡ್ಸೆ ವಾಗ್ದಾಳಿ ನಡೆಸಿದ್ದಾರೆ

- Advertisement -

ಏಕನಾಥ ಖಾಡ್ಸೆ ಮಹಾರಾಷ್ಟ್ರ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದು, ಭ್ರಷ್ಟಾಚಾರ ಆರೋಪದಲ್ಲಿ 2016ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

“ದೇವೇಂದ್ರ ಫಡ್ನವೀಸ್ ನನ್ನ ಜೀವನವನ್ನು ನಾಶ ಮಾಡಿದರು. ನಾನು ನಾಲ್ಕು ವರ್ಷಗಳ ಕಾಲ ಮಾನಸಿಕ ಉದ್ವೇಗದಿಂದ ಬಳಲಿದೆ. ನೀವು ನನ್ನನ್ನು ಪಕ್ಷ ಬಿಡುವಂತೆ ಮಾಡುತ್ತಿದ್ದೀರಿ ಎಂದು ಹಲವು ಬಾರಿ ಹೇಳಿದ್ದೇನೆ. ಬಿಜೆಪಿ ತೊರೆಯಲು ನನಗೆ ಬೇಸರವಾಗುತ್ತಿದೆ. ಆದರೆ, ಬೇರೆ ದಾರಿಯಿಲ್ಲ. ನನ್ನನ್ನು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲೂ ಯತ್ನಿಸಲಾಗಿದೆ’’ ಎಂದು ಖಾಡ್ಸೆ ಹೇಳಿದ್ದಾರೆ.

Join Whatsapp