ದಿಶಾ ಸಾಲಿಯಾನ್ ಸಾವು ಪ್ರಕರಣ | ಹೈಕೋರ್ಟ್ ಗೆ ಹೋಗಲು ಸುಪ್ರೀಂ ಕೊರ್ಟ್ ನಿರ್ದೇಶನ

Prasthutha|

ನವದೆಹಲಿ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣದ ಸಿಬಿಐ ತನಿಖೆಗೊಪ್ಪಿಸಲು ಹೈಕೋರ್ಟ್ ನಲ್ಲೇ ಮನವಿ ಮಾಡುವಂತೆ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ.

- Advertisement -

ಸಿಜೆಐ ಎಸ್ ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಬಾಂಬೆ ಹೈಕೋರ್ಟ್ ಇಂತಹ ಹಲವು ಪ್ರಕರಣಗಳ ವಿಚಾರಣೆ ನಡೆಸುತ್ತಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ತನಿಖಾಧಿಕಾರಿಗಳು, ಸಾಕ್ಷಿಗಳ ಬಗ್ಗೆ ಅದಕ್ಕೆ ಹೆಚ್ಚಿನ ಅರಿವಿದೆ. ಹೈಕೋರ್ಟ್ ನ ತೀರ್ಪಿನಿಂದ ಸಮಾಧಾನವಾಗದಿದ್ದಲ್ಲಿ, ಸುಪ್ರೀಂ ಕೋರ್ಟ್ ಗೆ ಬರಲು ಅರ್ಜಿದಾರರಿಗೆ ಪೂರ್ಣ ಅವಕಾಶವಿದೆ ಎಂದು ಕೊರ್ಟ್ ತಿಳಿಸಿದೆ.

ನಟ ಸುಶಾಂತ್ ರಜಪೂತ್ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಜೂ. 8ರಂದು ತಮ್ಮ ಮುಂಬೈ ನಿವಾಸದ 14ನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದರು. ಆ ಬಳಿಕ ಜೂ. 14ರಂದು ಸುಶಾಂತ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಬ್ಬರ ಸಾವು ಅಸಹಜವಾಗಿದೆ ಎಂದು ಅರ್ಜಿದಾರ, ನ್ಯಾಯವಾದಿ ಪುನೀತ್ ಧಂಡ ಪ್ರತಿಪಾದಿಸಿದ್ದರು. ಸುಶಾಂತ್ ಸಾವಿನ ಕುರಿತಂತೆ ಸಾಕಷ್ಟು ರಾಜಕೀಯ ಕೆಸರೆರಚಾಟ ನಡೆಯುತ್ತಿದೆ.

Join Whatsapp