ಜೆ.ಎನ್.ಯು ಮೇಲೆ ದಾಳಿ : ಕ್ಲೀನ್ ಚಿಟ್ ನೀಡಿದ ದೆಹಲಿ ಪೊಲೀಸ್

Prasthutha|

ಜೆ.ಎನ್.ಯು ವಿಶ್ವವಿದ್ಯಾನಿಲಯದಲ್ಲಿ ಜನವರಿ ರಂದು ನಡೆದ ದಾಳಿ ಮತ್ತು ಹಿಂಸಾಚಾರದಲ್ಲಿ ಪೊಲೀಸರ ಕಡೆಯಿಂದ ಯಾವುದೇ ನಿರ್ಲಕ್ಷ್ಯ ಸಂಭವಿಸಲಿಲ್ಲ ಎಂದು ವಿಶೇಷ ತನಿಖಾ ತಂಡ (ಎಸ್ಐಟಿ) ವರದಿ ಮಾಡಿದೆ. ಪೊಲೀಸರ ಕಡೆಯಿಂದ ಸಂಭವಿಸಿದ ನಿರ್ಲಕ್ಷ್ಯವನ್ನು ಪರಿಶೀಲಿಸಲು ನೇಮಿಸಿದ ಸಮಿತಿ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ. ಜೆ.ಎನ್.ಯು ವಿಶ್ವವಿದ್ಯಾಲಯದ ಅಧಿಕಾರಿಗಳ ಸೂಚನೆಯ ಮೇರೆಗೆ ಪೊಲೀಸರು ದಾಳಿಯ ಸಮಯದಲ್ಲಿ ಹೊರಗಿದ್ದರು ಮತ್ತು ಯಾವುದೇ ಸಮಸ್ಯೆ ಸಂಭವಿಸಲಿಲ್ಲ ಎಂದು ಖಚಿತಪಡಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ಪೊಲೀಸ್ ಜಂಟಿ ಆಯುಕ್ತೆ ಶಾಲಿನಿ ಸಿಂಗ್ ನೇತೃತ್ವದ ತಂಡ ಈ ವರದಿಯನ್ನು ಸಲ್ಲಿಸಿದೆ. ತನಿಖಾ ತಂಡವು ನಾಲ್ಕು ಇನ್ಸ್ಪೆಕ್ಟರ್ ಗಳು ಮತ್ತು ಇಬ್ಬರು ಎಸಿಪಿಗಳನ್ನು ಒಳಗೊಂಡಿದೆ.

ಹೊರಗಡೆ ಪೊಲೀಸರು ಕಾವಲು ನಿಂತಿರುವಾಗಲೇ ಕ್ಯಾಂಪಸಿನ ಒಳಗಡೆ ಮುಖವಾಡ ಧರಿಸಿದ ಗುಂಪೊಂದು ದಾಳಿ ಮಾಡಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಜನವರಿ 5ರಂದು ಮುಖವಾಡ ಧರಿಸಿದ ದುಷ್ಕರ್ಮಿಗಳು ಸುಮಾರು ನಾಲ್ಕು ಗಂಟೆಗಳ ಕಾಲ ಕಬ್ಬಿಣದ ರಾಡುಗಳಿಂದ ದಾಳಿ ನಡೆಸಿ 36 ವಿಧ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಗಾಯಗೊಳಿಸಿದ್ದರು. ಎಫ್ಐಆರ್ ದಾಖಲಿಸಿ ಪ್ರಕರಣವನ್ನು ಕ್ರೈಮ್ ಬ್ರಾಂಚ್ ಗೆ ಹಸ್ತಾಂತರಿಸಲಾಗಿದ್ದರೂ ಈವರೆಗೆ ಯಾರನ್ನೂ ಬಂಧಿಸಿಲ್ಲ.

- Advertisement -