ಜಾಹೀರಾತಿನಲ್ಲಿ ಲವ್ ಜಿಹಾದ್ ಆರೋಪ: ತನಿಶ್ಕ್ ಜ್ಯುವೆಲ್ಲರಿ ವಿರುದ್ಧ ಕೋಮುವಾದಿಗಳಿಂದ ಟ್ವಿಟ್ಟರ್ ಅಭಿಯಾನ

Prasthutha|

- Advertisement -

ಹೊಸದಿಲ್ಲಿ: ಅಂತರ್ ಜಾತಿ ವಿವಾಹಿತ ದಂಪತಿಯನ್ನು ತೋರಿಸುವ ಟೈಟನ್ ಗ್ರೂಪ್ ನ ತನಿಶ್ಕ್ ಜ್ಯುವೆಲ್ಲರಿಯ ಜಾಹೀರಾತೊಂದು ಟ್ವಿಟ್ಟರ್ ನಲ್ಲಿ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ. ಸೋಮವಾರದಂದು ಟ್ವಿಟ್ಟರ್ ನ ಟಾಪ್ ಟ್ರೆಂಡಿಂಗ್ ಗಳಲ್ಲಿ #Boycott Tanishq’ (ತನಿಶ್ಕ್ ಬಹಿಷ್ಕರಿಸಿ) ಒಂದಾಗಿತ್ತು.

ಈ ಜಾಹೀರಾತಿನ ಮೇಲೆ ನಿಷೇಧ ಮತ್ತು ಜ್ಯುವೆಲ್ಲರಿ ಬ್ರ್ಯಾಂಡನ್ನು ಬಹಿಷ್ಕರಿಸಲು ಆಗ್ರಹಿಸಿ 17000ಕ್ಕಿಂತಲೂ ಅಧಿಕ ಮಂದಿ ಟ್ವೀಟ್ ಮಾಡಿದ್ದಾರೆ.

- Advertisement -

ಅಕ್ಟೋಬರ್ 9ರಂದು ಬಿಡುಗಡೆಗೊಂಡ ಈ ಜಾಹೀರಾತನಲ್ಲಿ ತಮ್ಮ ಹಿಂದೂ ಸೊಸೆಗಾಗಿ ಮುಸ್ಲಿಮ್ ಕುಟುಂಬವೊಂದು ಸೀಮಂತಕ್ಕೆ ಸಿದ್ಧತೆ ನಡೆಸುವುದನ್ನು ತೋರಿಸಲಾಗಿದೆ.

ಜ್ಯುವೆಲ್ಲರಿ ಬ್ರ್ಯಾಂಡ್ ‘ಲವ್ ಜಿಹಾದ್’ ಪ್ರಚುರಪಡಿಸುತ್ತಿದೆ ಎಂದು ಟ್ವಿಟ್ಟರ್ ಬಳಕೆದಾರರು ಆರೋಪಿಸಿದ್ದಾರೆ.

Join Whatsapp