ಕುವೈಟ್ ಅಮೀರ್ ಆಗಿ ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಸಬಾಹ್

Prasthutha|

ಕುವೈಟ್ ನ ಹೊಸ ಅಮೀರ್ ಆಗಿ ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಸಬಾಹ್ ರವರು ಇಂದು ಅಧಿಕಾರವನ್ನು ಸ್ವೀಕರಿಸಿದ್ದಾರೆ.

- Advertisement -

ಅಮೆರಿಕಾದಲ್ಲಿ ನಿಧನರಾಗಿರುವ 91ರ ಹರೆಯದ ದಿವಂಗತ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಬಾಹ್ ರ ಮೃತದೇಹವನ್ನು ಅವರು ಬರಮಾಡಿಕೊಳ್ಳಲಿದ್ದಾರೆ.

ದಿವಂಗತ ಶೇಖ್ ಸಬಾಹ್ ರ ದೇಹವು ಇಂದು ಕುವೈಟ್ ನಗರಕ್ಕೆ ಇಂದು ಬರಲಿದೆ. ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಅಮೀರ್ ರ ಸಂಬಂಧಿಗಳು ಮಾತ್ರವೇ ಭಾಗವಹಿಸಲಿದ್ದಾರೆ.

- Advertisement -

83ರ ಹರೆಯದ ಶೇಖ್ ನವಾಫ್ ರವರು ನ್ಯಾಶನಲ್ ಅಸೆಂಬ್ಲಿಯ ಸಭೆಯಲ್ಲಿ ಇಂದು ಪ್ರತಿಜ್ನೆಯನ್ನು ಸ್ವೀಕರಿಸಿದರು.

Join Whatsapp