ಕಡಬ | ಮನೆಯಲ್ಲಿ ಅಕ್ರಮ ಸ್ಫೋಟಕ, ಪಿಸ್ತೂಲ್ ಪತ್ತೆ | ಜನಾರ್ಧನ ಗೌಡ ಬಂಧನ

Prasthutha|

ಪುತ್ತೂರು : ಯಾವುದೇ ಪರವಾನಿ ಇಲ್ಲದೆ, ಎರಡು ಪಿಸ್ತೂಲ್ ಮತ್ತು ಸ್ಫೋಟಕ ಮನೆಯಲ್ಲಿಟ್ಟುಕೊಂಡಿದ್ದ ಕಡಬದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಡಬದ ಪಾಲೋಳಿ ನಿವಾಸಿ ಜನಾರ್ಧನ ಗೌಡ ಬಂಧಿತ ವ್ಯಕ್ತಿ.

- Advertisement -

ಜನಾರ್ಧನ ಗೌಡನ ಮನೆಯಿಂದ ಎರಡು ಪಿಸ್ತೂಲ್, 2 ಖಾಲಿ ತೋಟೆ, ರಂಜಕ, ಪೊಟಾಶಿಯಂ, ಕೇಪುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನ ವಿರುದ್ಧ ಶಸ್ತ್ರಾಸ್ತ್ರಗಳ ಅಧಿನಿಯಮ ಮತ್ತು ಸ್ಫೋಟಕಗಳ ಅಧಿನಿಯಮದ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಆದೇಶದಂತೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಕ್ರಂ ಅಮ್ಟೆ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಕಡಬ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ರುಕ್ಮ ನಾಯ್ಕ್ ತಂಡ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯಲ್ಲಿ ಎಎಸ್ ಐ ಚಿದಾನಂದ ರೈ, ಎಚ್ ಸಿ ಸ್ಕರಿಯ, ಪಿಸಿ ಭವಿತ್ ರೈ, ಶ್ರೀಶೈಲ್, ಮಹೇಶ್, ಜೀಪು ಚಾಲಕ ಕನಕರಾಜ್ ಪಾಲ್ಗೊಂಡಿದ್ದರು.

Join Whatsapp