ಕಟ್ಟಡ ತುದಿಯಲ್ಲಿ ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ ಯುವಕನಿಗಾಗಿ ಪೊಲೀಸರ ಶೋಧ

Prasthutha|

ಮುಂಬೈ: ಅತೀ ಎತ್ತರದ ಕಟ್ಟಡವೊಂದರ ಇಕ್ಕಟ್ಟಾದ ಸಮತಲವೊಂದರ ಮೇಲೆ ಅಪಾಯಕಾರಿ ಸಾಹಸ ತೋರಿದ ವೈರಲ್ ವೀಡಿಯೊದಲ್ಲಿದ್ದ ಮುಂಬೈಯ ವ್ಯಕ್ತಿಯನ್ನು ಪೊಲೀಸರು ಹುಡುಕಾಡುತ್ತಿದ್ದರೆ.

- Advertisement -

ಆತನನ್ನು ಮತ್ತು ಈ ಕೃತ್ಯವನ್ನು ಮೊಬೈಲ್ ನಲ್ಲಿ ದಾಖಲಿಸಿದ ಆತನ ಇಬ್ಬರು ಒಡನಾಡಿಗಳನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೊ, ಯುವಕನೋರ್ವ 22ನೆ ಮಹಡಿಯ ಮೇಲೆ ಗಡಿ ಗೋಡೆಯ ಮೇಲೆ ಕುಳಿತು ಎನರ್ಜಿ ಡ್ರಿಂಕ್ ಸೇವಿಸುವುದನ್ನು ತೋರಿಸುತ್ತದೆ. ನಂತರ ಆತ ಕೇವಲ ಎರಡು ಅಡಿ ಅಗಲದ ಗೋಡೆಯ ಸಮತಲವಾದ ಅಂಚಿಗೆ ನೆಗೆದು ತನ್ನೆರಡು ಕೈಗಳ ಮೇಲೆ ನಿಂತು ಅಪಾಯಕಾರಿ ಸಾಹಸವನ್ನು ತೋರಿಸುತ್ತಾನೆ. ಆತನ ಒಡನಾಡಿಗಳು ಅದರ ಚಿತ್ರೀಕರಣ ಮಾಡುತ್ತಿರುತ್ತಾರೆ.

- Advertisement -

ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

Join Whatsapp