ಈದ್ ಮಿಲಾದ್ | ಬಹಿರಂಗ ಪ್ರದೇಶಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ

Prasthutha|

ಮಂಗಳೂರು : ಅ.29ರಂದು ಈದ್ ಮಿಲಾದ್ ಪ್ರಯುಕ್ತ, ಬಹಿರಂಗ ಪ್ರದೇಶಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಈ ಕುರಿತು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದಾರೆ.

- Advertisement -

ಕೋವಿಡ್ – 19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಸ್ವಚ್ಛತೆಯ ಜಾಗದಲ್ಲಿ ಕೈ ಶುಚಿಗೊಳಿಸಲು ಸೋಪ್ ಅಥವಾ ಸ್ಯಾನಿಟೈಸರ್ ಇಡಬೇಕು. ಸಾಮಾಜಿಕ ಅಂತರ ಕಡ್ಡಾಯವಿರಲಿ. ಬೃಹತ್ ಮೆರವಣಿಗೆಗಳು, ಬಹಿರಂಗ ಪ್ರದೇಶಗಳಲ್ಲಿ ಒಟ್ಟೊಟ್ಟಿಗೆ ಬರುವುದನ್ನು ನಿಷೇಧಿಸಲಾಗಿದೆ.

ಮೊಹಲ್ಲಾಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭಗಳನ್ನು ಆಯೋಜಿಸುವುದಕ್ಕೆ ಕಠಿಣ ನಿರ್ಬಂಧ ಹೇರಲಾಗಿದೆ.

Join Whatsapp